ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದೊಂದಿಗೆ ಎರಡು ಹಂತಗಳಲ್ಲಿ ನಡೆಯುವ ಸಂಸತ್ ಬಜೆಟ್ ಅಧಿವೇಶನಕ್ಕೆ ಬುಧವಾರ ಚಾಲನೆ ನೀಡಲಾಗುವುದು.
ಜನವರಿ 29ರಂದು ಆರ್ಥಿಕ ಸಮೀಕ್ಷೆ ಮಂಡಿಸಲಿದ್ದು, ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ವಿಬಿ ಜಿ ರಾಮ್ ಜಿ ಕಾಯ್ದೆಯ ವಿರುದ್ಧ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅಧಿವೇಶನದಲ್ಲಿ ಕೋಲಾಹಲ ನಿಶ್ಚಿತವಾಗಿದೆ.
ಇಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಸಂಸತ್ತು ಜಂಟಿ ಅಧಿವೇಶನ ಆರಂಭವಾಗಲಿದೆ. ಜನವರಿ 28ರಿಂದ ಫೆಬ್ರವರಿ 13ರವರೆಗೆ ಮೊದಲನೇ ಹಂತ, ಮಾರ್ಚ್ 9 ರಿಂದ ಏಪ್ರಿಲ್ 2ರವರೆಗೆ ಎರಡನೇ ಹಂತದಲ್ಲಿ ಅಧಿವೇಶನ ನಡೆಯಲಿದೆ.

