ನವದೆಹಲಿ: ಮುಂದಿನ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿದರವನ್ನು ಮತ್ತಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ಫೆಬ್ರವರಿ 6ರಂದು ಪ್ರಕಟವಾಗುವ ಆರ್.ಬಿ.ಐ. ತ್ರೈಮಾಸಿಕ ವಿತ್ತ ನೀತಿಯ ವೇಳೆ ಕೇಂದ್ರ ಬ್ಯಾಂಕ್ ಬಡ್ಡಿ ದರವನ್ನು ಮತ್ತೆ ಶೇಕಡ 0.25 ರಷ್ಟು ಕಡಿತ ಮಾಡುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಆಫ್ ಅಮೆರಿಕ ಅರ್ಥಶಾಸ್ತ್ರಜ್ಞರ ವರದಿ ಹೇಳಿದೆ.
ಆರ್‌ಬಿಐ ವಿತ್ತ ನೀತಿ ಬಡ್ಡಿದರ ಕಡಿತಕ್ಕೆ ವಾತಾವರಣ ಪೂರಕವಾಗಿದೆ. ಆರ್ಥಿಕ ಬೆಳವಣಿಗೆ ಏರಿಕೆಯಲ್ಲಿದೆ. ಹಣದುಬ್ಬರ ಸೌಮ್ಯವಾಗಿದೆ. ಹೀಗಾಗಿ ಮುಂದಿನ ವಾರ ಆರ್.ಬಿ.ಐ. ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ಬಡ್ಡಿದರವನ್ನು ಶೇಕಡ 0.25ರಷ್ಟು ಅಥವಾ 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತ ಮಾಡುವ ಸಾಧ್ಯತೆ ಇದೆ. ಈ ಮೂಲಕ ರೆಪೊ ದರವನ್ನು ಶೇ. 2.25ಕ್ಕೆ ತರಲಿದೆ ಎಂದು ಅಂದಾಜಿಸಲಾಗಿದೆ.
ರೆಪೊ ದರ ಕಡಿತವಾದಲ್ಲಿ ವಾಹನ, ಗೃಹ ಸಾಲ ಸೇರಿದಂತೆ ಇತರೆ ಸಾಲಗಳ ಮೇಲಿನ ಬಡ್ಡಿ ಹೊರೆ ಇಳಿಕೆಯಾಗಲಿದೆ.

