HomeEntertainmentನೆರೆಮನೆಯ ಯುವಕನ ಮೇಲೆ ಬಿಗ್ ಬಿ ಕಣ್ಣು: ಸೋಶಿಯಲ್ ಮೀಡಿಯಾ ವೀಡಿಯೋ ನೋಡಿ ಮನೆಗೆ ಕರೆಸಿಕೊಂಡ...

ನೆರೆಮನೆಯ ಯುವಕನ ಮೇಲೆ ಬಿಗ್ ಬಿ ಕಣ್ಣು: ಸೋಶಿಯಲ್ ಮೀಡಿಯಾ ವೀಡಿಯೋ ನೋಡಿ ಮನೆಗೆ ಕರೆಸಿಕೊಂಡ ಅಮಿತಾಭ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಸರಳತೆ ಮತ್ತು ಅಭಿಮಾನಿಗಳ ಮೇಲಿನ ಪ್ರೀತಿ ಮತ್ತೊಮ್ಮೆ ಸಾಬೀತಾಗಿದೆ. ತಮ್ಮ ಮುಂಬೈನ ‘ಜಲ್ಸಾ’ ನಿವಾಸದ ಪಕ್ಕದಲ್ಲೇ ವಾಸಿಸುವ ನಿರ್ಮಿತ್ ಜೇಸ್ರಾಣಿ ಎಂಬ ಯುವಕನ ಹಲವು ದಿನಗಳ ಆಸೆಯನ್ನು ಅಮಿತಾಭ್ ಈಡೇರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ಕೆಲವೇ ದಿನಗಳಲ್ಲಿ ಬಿಗ್ ಬಿ ಸ್ವತಃ ನಿರ್ಮಿತ್ ಅವರನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ನಿರ್ಮಿತ್ ಜೇಸ್ರಾಣಿ ಅವರು ತಮ್ಮ ಮನೆಯ ಕಿಟಕಿಯಿಂದ ಅಮಿತಾಭ್ ಬಚ್ಚನ್ ಅವರು ಅಭಿಮಾನಿಗಳಿಗೆ ದರ್ಶನ ನೀಡುವ ಅಪರೂಪದ ದೃಶ್ಯವನ್ನು ಚಿತ್ರೀಕರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. “ಸರ್, ನಾನು ನಿಮ್ಮ ನೆರೆಮನೆಯವನು. ಪ್ರತಿ ಭಾನುವಾರ ನೀವು ಅಭಿಮಾನಿಗಳಿಗೆ ಕೈ ಬೀಸಿದ ನಂತರ ನಮ್ಮ ಕಡೆಗೂ ತಿರುಗಿ ವಿಶ್ ಮಾಡುತ್ತೀರಿ. ನಿಮ್ಮ ಈ ವಿನಮ್ರತೆ ದೊಡ್ಡದು. ನಿಮ್ಮನ್ನು ಒಮ್ಮೆ ಭೇಟಿ ಮಾಡುವ ಅವಕಾಶ ಸಿಕ್ಕರೆ ಧನ್ಯನಾಗುತ್ತೇನೆ” ಎಂದು ವೀಡಿಯೋದಲ್ಲಿ ವಿನಂತಿಸಿದ್ದರು. ಈ ವೀಡಿಯೋ ಸಖತ್ ವೈರಲ್ ಆಗಿ ಕೋಟ್ಯಂತರ ವೀಕ್ಷಣೆ ಪಡೆದಿತ್ತು.

ಜಲ್ಸಾ ಬಂಗಲೆಗೆ ಆಹ್ವಾನ: ಈ ವೀಡಿಯೋ ಗಮನಿಸಿದ ಅಮಿತಾಭ್ ಬಚ್ಚನ್ ಅವರ ತಂಡವು ಸೋಮವಾರ (ಫೆಬ್ರವರಿ 9) ಸಂಜೆ 5 ಗಂಟೆಗೆ ಜಲ್ಸಾ ಬಂಗಲೆಗೆ ಬರುವಂತೆ ನಿರ್ಮಿತ್‌ಗೆ ಸಂದೇಶ ಕಳಿಸಿತ್ತು. ಅದರಂತೆ ಬಿಗ್ ಬಿ ಅವರನ್ನು ಭೇಟಿ ಮಾಡಿದ ನಿರ್ಮಿತ್, ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಕುರಿತು ವೀಡಿಯೋ ಹಂಚಿಕೊಂಡಿರುವ ಅವರು, “ನಾನು ಬಾಲಿವುಡ್‌ನ ಶೆಹನ್‌ಶಾನನ್ನು ಕೊನೆಗೂ ಭೇಟಿಯಾದೆ. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ನಾನು ಅವರ ಪಾದ ಮುಟ್ಟಲು ಹೋದಾಗ ಅವರು ಅದನ್ನು ತಡೆದು ಪ್ರೀತಿಯಿಂದ ಮಾತನಾಡಿಸಿದರು” ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಾರು 45 ವರ್ಷಗಳಿಂದ ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡುವ ಸಂಪ್ರದಾಯ ಇಟ್ಟುಕೊಂಡಿರುವ ಅಮಿತಾಭ್, ಇದೀಗ ತಮ್ಮ ನೆರೆಮನೆಯ ಯುವಕನಿಗೆ ವಿಶೇಷ ಆತಿಥ್ಯ ನೀಡುವ ಮೂಲಕ ಮತ್ತೊಮ್ಮೆ ಜನರ ಮನ ಗೆದ್ದಿದ್ದಾರೆ. ಸದ್ಯ ಅಮಿತಾಭ್ ಅವರು ‘ಕಲ್ಕಿ 2898 AD’ ಸೀಕ್ವೆಲ್ ಮತ್ತು ‘ಸೆಕ್ಷನ್ 84’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular