HomeLatest NewsBREAKING: ಬೀದರ್ ಕೆಡಿಪಿ ಸಭೆ ರಣರಂಗ: ಸಚಿವರ ಎದುರಲ್ಲೇ ಶಾಸಕರು, ಪರಿಷತ್ ಸದಸ್ಯರ ನಡುವೆ ಗಲಾಟೆ:...

BREAKING: ಬೀದರ್ ಕೆಡಿಪಿ ಸಭೆ ರಣರಂಗ: ಸಚಿವರ ಎದುರಲ್ಲೇ ಶಾಸಕರು, ಪರಿಷತ್ ಸದಸ್ಯರ ನಡುವೆ ಗಲಾಟೆ: ಮಾರಾಮಾರಿ ಹಂತಕ್ಕೆ ತಲುಪಿದ ನಾಯಕರು

ಬೀದರ್: ಬೀದರ್ ನಲ್ಲಿ ಸಚಿವ ಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆ ಇಂದು ಅಕ್ಷರಶಃ ರಣರಂಗವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಶಾಸಕರು ಹಾಗೂ ಎಂಎಲ್ ಸಿಗಳ ನಡುವೆ ಗಲಾಟೆ ನಡೆದು ಹೊಡೆದಾಡಿಕೊಂಡಿದ್ದಾರೆ.

ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ಹುಮ್ನಾಬಾದ್ ಶಾಸಕ ಸಿದ್ದು ಪಾಟೀಲ್, ಎಂಎಲ್ ಸಿ ಭೀಮರಾವ್ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ್ದಾರೆ. ಏಕವಚನದಲ್ಲಿ ಶಸಾಕರು ಭೀಮರಾವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಳ್ಳು ಆರೋಪ ಮಾಡುತ್ತಿದ್ದೀಯಾ ಎಂದು ಗದರಿದ್ದಾರೆ. ಇದ್ದರ ನಡುವೆ ವಾಗ್ವಾದ ತಾರಕ್ಕೇರಿದ್ದು, ಕೈಕೈ ಮಿಲಾಸಿಸಿಕೊಂಡಿದ್ದಾರೆ.

ಸಚಿವ ಈಶ್ವರ ಖಂಡ್ರೆ ಎದುರಲ್ಲೇ ಶಾಸಕ ಸಿದ್ದು ಪಾಟೀಲ್ ಹಾಗೂ ಎಂಎಲ್ ಸಿ ಭೀಮರಾವ್ ಇಬ್ಬರೂ ಹೊಡೆದಾಡಿಕೊಳ್ಳುವ ಹಂತ ತಲುಪಿ ಇಬ್ಬರೂ ಕೈ ಎತ್ತಿದ್ದಾರೆ. ಈ ವೇಳೆ ಮಧ್ಯಪ್ರದೇಶ ಮಾಡಿದ ಸಚಿವ ಈಶ್ವರ ಖಂಡ್ರೆ ಇಬ್ಬರೂ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಆದರೂ ಇಬ್ಬರೂ ನಾಯಕರು ಹಾಗೂ ಬೆಂಬಲಿಗರ ನಡುವೆ ಗಲಾಟೆ ಜೋರಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಶಾಸಕರು ಹಾಗೂ ಎಂಎಲ್ ಸಿಯನ್ನು ತಡೆದಿದ್ದಾರೆ. ಇಬ್ಬರೂ ನಾಯಕರು ಕೆಡಿಪಿ ಸಭೆಯಿಂದಲೇ ಹೊರ ನಡೆದ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular