HomeKarnatakaBREAKING: ಬೆಂಗಳೂರಿನಲ್ಲಿ ಮಳೆಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

BREAKING: ಬೆಂಗಳೂರಿನಲ್ಲಿ ಮಳೆಗೆ ಮತ್ತೊಂದು ಬಲಿ: ಸಾವಿನ ಸಂಖ್ಯೆ 10ಕ್ಕೆ ಏರಿಕೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರುದ ಬಿರುಗಾಳಿ ಗುಡುಗು ಸಹಿತ ಭಾರಿ ಮಳೆಗೆ ಮತ್ತೊಂದು ಬಲಿಯಾಗಿದೆ. ಚಾಮರಾಜಪೇಟೆಯಲ್ಲಿ ವ್ಯಕ್ತಿ ಯೋರ್ವನ ಮೇಲೆ ಮೇಲ್ಛಾವಣಿ, ಇಟ್ಟಿಗೆ ಬಿದ್ದು ಮೃತಪಟ್ಟಿದ್ದಾರೆ.

ಮಂಜುನಾಥ್ ಮೃತ ದುರ್ದೈವಿ. ಚಾಮರಾಜಪೇಟೆಯಲ್ಲಿ ಮಂಜುನಾಥ್ ವಾಸವಿದ್ದ ಪಕ್ಕದ ಮನೆಯ ಶೀಟ್ ಮೇಲ್ಛಾವಣಿ ಹಾಗೂ ಸಿಮೆಂಟ್ ಇಟ್ಟಿಗೆ ಗಾಳಿಗೆ ಹಾರಿ ಬಿದ್ದಿದೆ. ಮಂಜುನಾಥ್ ಅವರ ಮೇಲೆಯೇ ಮೇಲ್ಛಾವಣಿ, ಸಿಮೆಂಟ್ ಇಟ್ಟಿಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಸಂಜೆ ಕೇವಲ ಒಂದು ಗಂಟೆ ಸುರುದ ಬಿರುಗಾಳಿ, ರಣ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಜನರು ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಆಸಪ್ತ್ರೆಗೆ ದಾಖಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿನ್ನೇ ಒಂದು ಗಂಟೆ ಸುರುದ ಮಳೆ ಅವಾಂತರಕ್ಕೆ ವಿವಿಧ ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ ಒಟ್ಟು 10 ಜನರು ಮೃತಪಟ್ಟಿದ್ದಾರೆ. ಬೆಂಅಗ್ಳೂರಿನಲ್ಲಿ ಇನ್ನೂ ಮೀಊರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular