HomeKarnatakaBREAKING: ಊಟ ಮಾಡುತ್ತಿದ್ದಾಗಲೇ ಹೃದಯಾಘಾತ: ಪತ್ನಿ, ಮಗಳ ಕಣ್ಣೆದುರೇ ಕೊನೆಯುಸಿರೆಳೆದ ವ್ಯಕ್ತಿ

BREAKING: ಊಟ ಮಾಡುತ್ತಿದ್ದಾಗಲೇ ಹೃದಯಾಘಾತ: ಪತ್ನಿ, ಮಗಳ ಕಣ್ಣೆದುರೇ ಕೊನೆಯುಸಿರೆಳೆದ ವ್ಯಕ್ತಿ

ರಾಮನಗರ: ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕ್ಕಿದ್ದಂತೆ ಹೃದಯಗಹಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಚಶೆಟ್ಟಿಹಳ್ಳಿಯಲ್ಲಿ ನಡೆದಿದೆ.

ಮಂಚಶೆಟ್ಟಿಹಳ್ಳಿ ನಿವಾಸಿ ಶಿವಲಿಂಗಯ್ಯ ಮೃತ ದುರ್ದೈವಿ. ರಾತ್ರಿ ಮಗಳು- ಅಳಿಯನ ಜೊತೆ ಮನೆಯಲ್ಲಿ ಊಟಕ್ಕೆ ಕುಳಿದ್ದ ವ್ಯಕ್ತಿ ಊಟ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಮಗಳು ಅಪ್ಪನನ್ನು ಮಂಚಕ್ಕೆ ಕೂರಿಸಿ ಪ್ರಥಮ ಚಿಕಿತ್ಸೆ ನೀಡಲು ಯತ್ನಿಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಶಿವಲಿಂಗಯ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪತ್ನಿ, ಮಗಳು-ಅಳಿಯನ ಎದುರಲ್ಲೇ ಹೃದಯಾಘಾತದಿಂದ ಶಿವಲಿಂಗಯ್ಯ ಕೊನೆಯುಸಿರೆಳೆದಿದ್ದಾರೆ. ಊಟಕ್ಕೆ ಕುಳಿದಿದ್ದ ವ್ಯಕ್ತಿ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದು ಬಿದ್ದ ದೃಶ್ಯ ಮನೆಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾರ್ಖಂಡ್ ಉನ್ನತ ಶಿಕ್ಷಣ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತಕ್ಕೆ ಬಲಿ

ರಾಂಚಿ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಾರ್ಖಂಡ್ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮತ್ತು ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.

2019 ರಲ್ಲಿ ಗಿರಿದಿಹ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಸುದಿವ್ಯ ಕುಮಾರ್ ಸೋನು, ಮುಖ್ಯಮಂತ್ರಿ ಹೇಮಂತ್ ಸೊರೆನ್ ಸರ್ಕಾರದಲ್ಲಿ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದರು. ಇದೀಗ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.

ಸಿದಿವ್ಯ ಕುಮಾರ್, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ವಿಶ್ವಾಸಾರ್ಹ ಸಹಾಯಕರಾಗಿದ್ದರು. 2024 ರಲ್ಲಿ ಭೂ ವಂಚನೆ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಸೋರೆನ್ ಬಂಧನದ ನಂತರದ ಅವಧಿ ಸೇರಿದಂತೆ ಹಲವಾರು ರಾಜಕೀಯ ಸವಾಲುಗಳ ಸಮಯದಲ್ಲಿ ಜೆಎಂಎಂ ಪಕ್ಷ ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಅವರ ಸಾವಿಗೆ ಕೆಲವೇ ದಿನಗಳ ಮೊದಲು ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ನಿರ್ವಹಣಾ ಪದ್ಧತಿಗಳನ್ನು ಅಧ್ಯಯನ ಮಾಡಲು ಜಾರ್ಖಂಡ್ ಸರ್ಕಾರದ ನಿಯೋಗದ ನೇತೃತ್ವ ವಹಿಸಿ, ಕರ್ನಾಟಕಕ್ಕೆ ಬಂದಿದ್ದರು. ಭೇಟಿಯ ಸಮಯದಲ್ಲಿ, ಪ್ರವಾಸೋದ್ಯಮ ಮತ್ತು ಅರಣ್ಯ ನಿರ್ವಹಣೆಯಲ್ಲಿ ಸಂಭಾವ್ಯ ಸಹಯೋಗವನ್ನು ಚರ್ಚಿಸಲು ಅವರು ಕರ್ನಾಟಕ ಪ್ರವಾಸೋದ್ಯಮ ಸಚಿವ ಕೆ ಜೆ ಜಾರ್ಜ್ ಅವರನ್ನು ಭೇಟಿಯಾಗಿದ್ದರು.

ಸುದಿವ್ಯ ಕುಮಾರ್ ಸೋನು ಪ್ರವಾಸೋದ್ಯಮ, ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಯುವಜನ ವ್ಯವಹಾರಗಳ ಇಲಾಖೆಗಳ ಉಸ್ತುವಾರಿ ವಹಿಸಿದ್ದರು. ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ ಜೆಎಂಎಂ ಪಕ್ಷ ಸಂತಾಪ ಸೂಚಿಸಿದೆ.

ಈ ಬಗ್ಗೆ ಎಕ್ಸ್‌ನಲ್ಲಿ, ಜೆಎಂಎಂ ಪಕ್ಷದ ಒಡನಾಡಿ ಮತ್ತು ಜಾರ್ಖಂಡ್ ಸರ್ಕಾರದ ಸಚಿವರಾಗಿದ್ದ ಸುದಿವ್ಯ ಕುಮಾರ್ ಅವರ ಅಕಾಲಿಕ ನಿಧನದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ ಕುಟುಂಬ ದಿಗ್ಭ್ರಮೆಗೊಂಡಿದೆ. ಅವರ ನಿಧನವು ಕುಟುಂಬದ ಸದಸ್ಯರನ್ನು ದುಃಖಕ್ಕೆ ದೂಡಿದೆ. ಸರ್ಕಾರ ಮತ್ತು ರಾಜ್ಯ ಎರಡಕ್ಕೂ ಅವರ ನಷ್ಟವನ್ನು ಭರಿಸಲಾಗದು. ಪಕ್ಷಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಪಕ್ಷ ಬರೆದುಕೊಂಡಿದೆ.

ಸುದಿವ್ಯ ಕುಮಾರ್ ಅವರ ನಿಧನಕ್ಕೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಸಂತಾಪ ಸೂಚಿಸಿದ್ದು, ಈ ಸಾವು ನನಗೆ ವೈಯಕ್ತಿಕ ನಷ್ಟ ಉಂಟುಮಾಡಿದೆ. ಅವರು ರಾಜ್ಯದ ಗುರುತು ಮತ್ತು ಹಕ್ಕುಗಳಿಗೆ ನೀಡಿದ ಕೊಡುಗೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದಿದ್ದಾರೆ.

ಸಚಿವ ದೀಪಕ್ ಬಿರುವಾ ಕೂಡ ಸಂತಾಪ ವ್ಯಕ್ತಪಡಿಸಿದ್ದು, ನನ್ನ ಸಹ ಸಚಿವರಾಗಿದ್ದ ಸಹೋದರ ಸುದಿವ್ಯ ಸೋನು ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ಸೆ.5ರ ರಾತ್ರಿ ಅವರ ಆರೋಗ್ಯ ಹದಗೆಟ್ಟಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular