HomeKarnatakaಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಪೊಲೀಸರಿಂದ ಕಠಿಣ ರೂಲ್ಸ್: ಇಲಾಖೆಗಳ ಅನುಮತಿ ಕಡ್ಡಾಯ

ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಪೊಲೀಸರಿಂದ ಕಠಿಣ ರೂಲ್ಸ್: ಇಲಾಖೆಗಳ ಅನುಮತಿ ಕಡ್ಡಾಯ

ಬೆಂಗಳೂರು: ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಪೊಲೀಸರಿಂದ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಗಣೇಶೋತ್ಸವ ಆಚರಣೆಯ ಜವಾಬ್ದಾರಿ ಆಯೋಜಕರದ್ದಾಗಿರುತ್ತದೆ.

ಪೊಲೀಸರು ಮತ್ತು ಜಿಬಿಎ ನಿಯಮಾವಳಿ ಮೀರದಂತೆ ಸೂಚನೆ ನೀಡಲಾಗಿದೆ. ಗಣೇಶೋತ್ಸವಕ್ಕೆ ಬೇರೆ ಇಲಾಖೆಗಳ ಅನುಮತಿ ಕಡ್ಡಾಯಗೊಳಿಸಲಾಗಿದೆ. ಅನುಮತಿ ಪಡೆದಿದ್ದರೆ ಮಾತ್ರ ಗಣೇಶ ಕೂರಿಸಲು ಅವಕಾಶ ನೀಡಲಾಗುವುದು. ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿದಂತೆ ಸೂಚನೆ ನೀಡಲಾಗಿದೆ.

ಟೈಮಿಂಗ್ಸ್ ಪ್ರಕಾರ ನಿಗದಿಪಡಿಸಿದ ರೂಟ್ ನಲ್ಲಿ ಮೆರವಣಿಗೆ ನಡೆಸಬೇಕು. ವಿಶೇಷವಾಗಿ ಸ್ವಯಂಸೇವಕರ ಪಟ್ಟಿಯನ್ನು ಪೊಲೀಸರಿಗೆ ಕೊಡಬೇಕು. ಮೆರವಣಿಗೆಯ ಮಾರ್ಗ ಮತ್ತು ಗಣೇಶ ವಿಸರ್ಜನೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಬೇಕು. ಜಿಬಿಎ ಅಧಿಕಾರಿಗಳು, ಡಿಸಿಪಿಗಳಿಂದ ಪರಿಶೀಲನೆ ನಡೆಸಬೇಕು ಎಂದು ಹೇಳಲಾಗಿದ್ದು, ನಿಯಮ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ನಿಯಮ ಜಾರಿಗೆ ತರಲಾಗಿದೆ. ಗಣೇಶೋತ್ಸವ ಆಚರಣೆಯ ಜವಾಬ್ದಾರಿ ಆಯೋಜಕರದ್ದಾಗಿದೆ. ಪೊಲೀಸರು ಮತ್ತು ಜಿಬಿಎ ನಿಯಾಮವಳಿ ಮೀರದಂತೆ ಸೂಚನೆ ನೀಡಲಾಗಿದೆ. ಗಣೇಶೋತ್ಸವಕ್ಕೆ ಬೇರೆ ಇಲಾಖೆಗಳ ಅನುಮತಿ ಕಡ್ಡಾಯವಾಗಿದ್ದು, ಅನುಮತಿ ಪಡೆದಿದ್ದರೆ ಮಾತ್ರ ಗಣೇಶ ಕೂರಿಸಲು ಅವಕಾಶ ಇರಲಿದೆ. ಇದರ ಜೊತೆಗೆ ಸುಪ್ರೀಂಕೋರ್ಟ್ ಆದೇಶಗಳನ್ನ ಉಲ್ಲಂಘಿಸುವಂತಿಲ್ಲ. ಟೈಮಿಂಗ್ಸ್ ಪ್ರಕಾರ ನಿಗದಿಪಡಿಸಿದ ರೂಟ್​ನಲ್ಲೇ ಮೆರವಣಿಗೆ ನಡೆಯಬೇಕು. ವಿಶೇಷವಾಗಿ ಸ್ವಯಂಸೇವಕರ ಪಟ್ಟಿ ಪೊಲೀಸರಿಗೆ ಕೊಡ್ಬೇಕು. ಮೆರವಣಿಗೆ ಮಾರ್ಗ ಮತ್ತು ಗಣೇಶ ವಿಸರ್ಜನೆ ಸ್ಥಳಗಳಲ್ಲಿ ಜಿಬಿಎ ಹಾಗೂ ಸ್ಥಳೀಯ ಆಯಾ ಡಿಸಿಪಿಗಳಿಂದ ಪರಿಶೀಲನೆ ನಡೆಯಲಿದೆ. ನಿಯಾಮವಳಿ ಉಲ್ಲಂಘನೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಿಒಪಿ ಗಣೇಶ ಮೂರ್ತಿ ನಿಷೇಧ

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಲಮೂಲಗಳ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್‌ (ಪಿಒಪಿ) ಹಾಗೂ ಪರಿಸರಕ್ಕೆ ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಕೆ, ತಯಾರಿಕೆ ಮತ್ತು ಮಾರಾಟದ ವಿರುದ್ಧ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿವೆ.

ಪಿಒಪಿ ಗಣೇಶ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗದ ಕಾರಣ, ವಿಸರ್ಜನೆಯ ಬಳಿಕ ಕೆರೆ, ನದಿ, ಹಳ್ಳ ಹಾಗೂ ಇತರ ಜಲಮೂಲಗಳಲ್ಲಿ ಮೂರ್ತಿಯ ಅವಶೇಷಗಳು ಉಳಿದು ಜಲಮಾಲಿನ್ಯಕ್ಕೆ ಕಾರಣವಾಗುತ್ತವೆ. ಮೂರ್ತಿಗಳಿಗೆ ಬಳಸುವ ಕೆಲವು ರಾಸಾಯನಿಕ ಬಣ್ಣಗಳಲ್ಲಿರುವ ಭಾರಲೋಹಗಳು ಜಲಚರಗಳು ಹಾಗೂ ಜಲ ಪರಿಸರದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಬಳಕೆಗೆ ಅಧಿಕಾರಿಗಳು ಒತ್ತು ನೀಡುತ್ತಿದ್ದಾರೆ.

ಕರ್ನಾಟಕದಲ್ಲಿ ಪಿಒಪಿ ಗಣೇಶ ಮೂರ್ತಿಗಳ ವಿರುದ್ಧದ ನಿಷೇಧ ಹೊಸದಾಗಿ ಜಾರಿಯಾಗಿರುವ ಕ್ರಮವಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಹಲವು ವರ್ಷಗಳಿಂದ ನಿರ್ಬಂಧ ಜಾರಿಗೊಳಿಸುತ್ತಿದ್ದು, 2023ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿದ ನಿರ್ದೇಶನಗಳು ಹಾಗೂ ನಂತರ ರಾಜ್ಯ ಸರ್ಕಾರದ ಕ್ರಮಗಳ ಮೂಲಕ ನಿಷೇಧವನ್ನು ಮತ್ತಷ್ಟು ಬಲಪಡಿಸಲಾಗಿದೆ. 2025ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡ ಪಿಒಪಿ ಮೂರ್ತಿಗಳ ನಿಷೇಧಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಇದೀಗ ಹಬ್ಬದ ಸಂದರ್ಭದಲ್ಲಿ ಪಿಒಪಿ ಮೂರ್ತಿಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯಾಗದಂತೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಮಾರುಕಟ್ಟೆ ಹಾಗೂ ಮೂರ್ತಿ ತಯಾರಿಕಾ ಘಟಕಗಳಲ್ಲಿ ಪರಿಶೀಲನೆ ನಡೆಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. 2026ರ ಗಣೇಶೋತ್ಸವಕ್ಕೂ ಮುನ್ನ ರಾಜ್ಯದ ವಿವಿಧೆಡೆ ಅಧಿಕಾರಿಗಳು ಪರಿಶೀಲನೆ ಹಾಗೂ ಜಾಗೃತಿ ಅಭಿಯಾನಗಳನ್ನು ಕೈಗೊಂಡಿರುವುದು ವರದಿಯಾಗಿದೆ.

ಬೆಂಗಳೂರಿನಲ್ಲಿಯೂ ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪೂಜೆಗೆ ಅವಕಾಶ ನೀಡದಿರುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಪಷ್ಟಪಡಿಸಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಬಳಸುವಂತೆ ಮನವಿ ಮಾಡಿದೆ.

ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವುದರಿಂದ ವಿಸರ್ಜನೆಯ ಸಂದರ್ಭದಲ್ಲಿ ಮಣ್ಣು ನೈಸರ್ಗಿಕವಾಗಿ ಪರಿಸರಕ್ಕೆ ಮರಳುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಜೇಡಿಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಅಥವಾ ವಿಷಕಾರಿಯಲ್ಲದ ಬಣ್ಣಗಳನ್ನು ಬಳಸಿ ಅಲಂಕರಿಸಿದ ಮೂರ್ತಿಗಳನ್ನು ಆಯ್ಕೆ ಮಾಡುವುದು ಪರಿಸರದ ದೃಷ್ಟಿಯಿಂದ ಸೂಕ್ತವಾಗಿದೆ.

ಅಧಿಕಾರಿಗಳ ಪ್ರಕಾರ, ಗಣೇಶೋತ್ಸವವು ಭಕ್ತಿ ಮತ್ತು ಸಂಭ್ರಮದ ಹಬ್ಬವಾಗಿದ್ದು, ಅದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನೂ ಸಾರ್ವಜನಿಕರು ಮರೆಯಬಾರದು. ಹಬ್ಬದ ಸಂದರ್ಭದಲ್ಲಿ ಕೆರೆ, ನದಿ ಸೇರಿದಂತೆ ನೈಸರ್ಗಿಕ ಜಲಮೂಲಗಳಲ್ಲಿ ತ್ಯಾಜ್ಯ ಎಸೆಯದಂತೆ ಹಾಗೂ ವಿಸರ್ಜನೆಗೆ ಸ್ಥಳೀಯ ಆಡಳಿತ ವ್ಯವಸ್ಥೆ ಮಾಡಿರುವ ಕೃತಕ ಟ್ಯಾಂಕ್‌ಗಳು ಅಥವಾ ನಿಗದಿತ ಸ್ಥಳಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗುತ್ತಿದೆ.

ಪಿಒಪಿ ಮೂರ್ತಿಗಳ ನಿಷೇಧದ ಉದ್ದೇಶ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸುವುದಲ್ಲ. ಬದಲಾಗಿ ಜಲಮೂಲಗಳ ಸಂರಕ್ಷಣೆ, ಜಲಚರಗಳ ರಕ್ಷಣೆ ಮತ್ತು ಭವಿಷ್ಯದ ಪೀಳಿಗೆಗೆ ಸ್ವಚ್ಛ ಪರಿಸರವನ್ನು ಉಳಿಸುವುದೇ ಪ್ರಮುಖ ಉದ್ದೇಶವಾಗಿದೆ. ಹೀಗಾಗಿ ಸಾರ್ವಜನಿಕರು ಮತ್ತು ಮೂರ್ತಿ ತಯಾರಕರು ನಿಯಮಗಳನ್ನು ಪಾಲಿಸಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular