HomeKarnatakaಕರೆ ಸ್ವೀಕರಿಸಿಲ್ಲ ಎಂದು ಮನನೊಂದು ಲವ್ವರ್’ಗೆ ವಿಡಿಯೋ ಕಾಲ್ ಮಾಡಿ ಬಾಗಲಕೋಟೆಯಲ್ಲಿ ಮಹಿಳೆ ಆತ್ಮಹತ್ಯೆ.!

ಕರೆ ಸ್ವೀಕರಿಸಿಲ್ಲ ಎಂದು ಮನನೊಂದು ಲವ್ವರ್’ಗೆ ವಿಡಿಯೋ ಕಾಲ್ ಮಾಡಿ ಬಾಗಲಕೋಟೆಯಲ್ಲಿ ಮಹಿಳೆ ಆತ್ಮಹತ್ಯೆ.!

ಬಾಗಲಕೋಟೆ: ಪ್ರಿಯಕರ ತನ್ನ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದ 27 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮೆಹಬೂಬ್ ಬಿ. (27) ಎಂದು ಗುರುತಿಸಲಾಗಿದೆ. ಅವರು ಇಬ್ಬರು ಮಕ್ಕಳ ತಾಯಿಯಾಗಿದ್ದು, ಕಿರಣ್ ಎಂಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

ಮೆಹಬೂಬ್ ಅವರು ಕಿರಣ್‌ಗೆ ಹಲವು ಬಾರಿ ಕರೆ ಮಾಡುತ್ತಿದ್ದರೂ ಆತ ಕರೆ ಸ್ವೀಕರಿಸುತ್ತಿರಲಿಲ್ಲ. ಅಲ್ಲದೆ, ಆತನೂ ತನಗೆ ಕರೆ ಮಾಡುತ್ತಿಲ್ಲ ಎಂಬ ವಿಚಾರದಿಂದ ಅವರು ಮನನೊಂದಿದ್ದರು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನೆಲೆಯಲ್ಲಿ “ನೀನು ನನಗೆ ಫೋನ್ ಮಾಡದಿದ್ದರೆ ಸಾಯುತ್ತೇನೆ” ಎಂದು ಪ್ರಿಯಕರನಿಗೆ ವಿಡಿಯೋ ಕರೆ ಮಾಡಿ ಹೇಳಿದ್ದಾಗಿ ತಿಳಿದುಬಂದಿದೆ. ಅಲ್ಲದೆ, “ನಿನ್ನ ಹೆಸರನ್ನು ಬರೆದು ಸಾಯುತ್ತೇನೆ” ಎಂದು ಆಡಿಯೋ ಸಂದೇಶವನ್ನೂ ಕಳುಹಿಸಿದ್ದರು ಎನ್ನಲಾಗಿದೆ.

ಇದಲ್ಲದೆ, ತಾನು ಕಳುಹಿಸುವ ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ. ಬಳಿಕ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪಾರ್ಸೆಲ್ ಕೊಟ್ಟು ‘ಐ ಲವ್ ಯೂ’ ಮೆಸೇಜ್; ಪ್ರಶ್ನಿಸಿದ ಮಹಿಳೆಗೆ ‘ಹೋಗಿ ದೂರು ಕೊಡು’ ಎಂದ Rapido ರೈಡರ್

ನೋಯ್ಡಾ: ಮಹಿಳೆಯರ ಸುರಕ್ಷತೆ ಮತ್ತು ವೈಯಕ್ತಿಕ ಮಾಹಿತಿಯ ರಕ್ಷಣೆಗೆ ಆ್ಯಪ್ ಆಧಾರಿತ ಸೇವಾ ಸಂಸ್ಥೆಗಳು ಹಲವು ಭರವಸೆ ನೀಡುತ್ತಿದ್ದರೂ, ಕೆಲವೊಮ್ಮೆ ನೆಲಮಟ್ಟದಲ್ಲಿ ನಡೆಯುವ ಘಟನೆಗಳು ಆತಂಕ ಮೂಡಿಸುತ್ತವೆ. ಇಂತಹದ್ದೇ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬೆಳಕಿಗೆ ಬಂದಿದೆ.

ನೋಯ್ಡಾ ಮೂಲದ ಗೀತಿಕಾ ಶ್ರೀವಾಸ್ತವ ಎಂಬ ಮಹಿಳೆ ಪಾರ್ಸೆಲ್ ಡೆಲಿವರಿಗಾಗಿ Rapido ಸೇವೆಯನ್ನು ಬಳಸಿಕೊಂಡಿದ್ದರು. ಪಾರ್ಸೆಲ್ ಡೆಲಿವರಿ ಪೂರ್ಣಗೊಂಡ ಕೆಲವೇ ಸಮಯದ ಬಳಿಕ ರೈಡರ್ ಅವರ ವೈಯಕ್ತಿಕ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿದ್ದಾನೆ.

ಮೊದಲು “ಹಲೋ.. ಹೇಗಿದ್ದೀರಿ?” ಎಂದು ಮೆಸೇಜ್ ಮಾಡಿದ ರೈಡರ್, ಬಳಿಕ “ಐ ಲವ್ ಯೂ” ಎಂದು ಮತ್ತೊಂದು ಸಂದೇಶ ಕಳುಹಿಸಿದ್ದಾನೆ. ಇದರಿಂದ ಅಸಮಾಧಾನಗೊಂಡ ಗೀತಿಕಾ, ಇನ್ನು ಮುಂದೆ ಯಾವುದೇ ಸಂದೇಶ ಕಳುಹಿಸಬಾರದು ಎಂದು ಎಚ್ಚರಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ವಿಚಾರವನ್ನು ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. ಆದರೆ ರೈಡರ್ ಕ್ಷಮೆಯಾಚಿಸುವ ಬದಲು, “ಹೋಗಿ ದೂರು ಕೊಡು. Rapido ಕಂಪನಿಗೂ ದೂರು ಕೊಡು” ಎಂದು ಸವಾಲಿನ ರೀತಿಯಲ್ಲಿ ಉತ್ತರಿಸಿದ್ದಾನೆ.

ಈ ಸಂಭಾಷಣೆಯ ವಾಟ್ಸಾಪ್ ಸ್ಕ್ರೀನ್‌ಶಾಟ್‌ಗಳನ್ನು ಗೀತಿಕಾ ಅವರು LinkedInನಲ್ಲಿ ಹಂಚಿಕೊಂಡಿದ್ದು, ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನೆ

“ಮಹಿಳೆಯಾಗಿ ಬದುಕುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಸಣ್ಣ ಪಾರ್ಸೆಲ್ ಕಳುಹಿಸಲು ಕೂಡ ಡೆಲಿವರಿ ಸಿಬ್ಬಂದಿಯಿಂದ ಇಂತಹ ಕಿರುಕುಳ ಎದುರಿಸಬೇಕೇ?” ಎಂದು ಗೀತಿಕಾ ಪ್ರಶ್ನಿಸಿದ್ದಾರೆ.

ರೈಡರ್‌ಗಳನ್ನು ನೇಮಕ ಮಾಡುವ ಮುನ್ನ ಅವರ ಹಿನ್ನೆಲೆ ಮತ್ತು ವರ್ತನೆಯ ಬಗ್ಗೆ ಕಂಪನಿಗಳು ಸೂಕ್ತ ಪರಿಶೀಲನೆ ನಡೆಸುತ್ತವೆಯೇ ಎಂಬ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.

Rapido ಸಂಸ್ಥೆಯಿಂದ ಪ್ರತಿಕ್ರಿಯೆ

ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ Rapido ಸಂಸ್ಥೆ ಪ್ರತಿಕ್ರಿಯಿಸಿದ್ದು, ನಡೆದ ಘಟನೆಗೆ ವಿಷಾದ ವ್ಯಕ್ತಪಡಿಸಿ ಮಹಿಳೆಯ ಬಳಿ ಕ್ಷಮೆಯಾಚಿಸಿದೆ. ಗ್ರಾಹಕರ ಸುರಕ್ಷತೆ ಮತ್ತು ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಸಂಸ್ಥೆ ತಿಳಿಸಿದೆ.

ಆದರೆ, ಸಂಬಂಧಪಟ್ಟ ರೈಡರ್ ವಿರುದ್ಧ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲ. ಇದರಿಂದ ಸಾಮಾಜಿಕ ಜಾಲತಾಣ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಕೇವಲ ಕ್ಷಮೆಯಾಚನೆ ಸಾಕಾಗುವುದಿಲ್ಲ, ಮಹಿಳೆಯರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular