HomeKarnatakaರಾಜ್ಯದ ಯಜಮಾನಿಯರೇ ಗಮನಿಸಿ :  'ಗೃಹಲಕ್ಷ್ಮಿ ಯೋಜನೆ' ಬಗ್ಗೆ ಬಿಗ್ ಅಪ್ ಡೇಟ್.!

ರಾಜ್ಯದ ಯಜಮಾನಿಯರೇ ಗಮನಿಸಿ :  ‘ಗೃಹಲಕ್ಷ್ಮಿ ಯೋಜನೆ’ ಬಗ್ಗೆ ಬಿಗ್ ಅಪ್ ಡೇಟ್.!

ಗೃಹಲಕ್ಷ್ಮಿ ಯೋಜನೆಯಡಿ ಈವರೆಗೆ ಸೌಲಭ್ಯ ಪಡೆಯುತ್ತಿದ್ದ ಫಲಾನುಭವಿಗಳು ಮರಣ ಹೊಂದಿದ ಪ್ರಕರಣಗಳಲ್ಲಿ, ಮನೆಯ ಮುಂದಿನ ಯಜಮಾನಿಯರು ಯೋಜನೆಯ ಲಾಭ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ಶಿವಮೊಗ್ಗ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಮಧು ಹೆಚ್. ಎಂ. ತಿಳಿಸಿದ್ದಾರೆ.

ಬುಧವಾರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

ಮರಣ ಹೊಂದಿದ ಫಲಾನುಭವಿಗಳ ಹೆಸರಿಗೆ ಹಣ ವರ್ಗಾವಣೆಯಾಗುವುದನ್ನು ತಡೆದು, ಮನೆಯ ಮುಂದಿನ ಯಜಮಾನಿಯರು ಈ ಬಗ್ಗೆ ಮಾಹಿತಿ ನೀಡಿ ಹೊಸ ಅರ್ಜಿ ಸಲ್ಲಿಸಬೇಕು. ಮರಣ ಹೊಂದಿದ ವ್ಯಕ್ತಿಯ ಜೀವಂತ ಪ್ರಮಾಣ ಪತ್ರದ ಬಗ್ಗೆ ಸದ್ಯಕ್ಕೆ ಆತಂಕ ಬೇಡ; ಸರ್ಕಾರದ ಮುಂದಿನ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು.2,044 ಫಲಾನುಭವಿಗಳನ್ನು ಐಟಿ/ಜಿಎಸ್‌ಟಿ ವ್ಯಾಪ್ತಿಯಡಿ ಪರಿಗಣಿಸಲಾಗಿದ್ದು, 42 ಫಲಾನುಭವಿಗಳ ಎನ್‌ಪಿಸಿಐ (NPCI) ಬಾಕಿ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅನ್ನಭಾಗ್ಯ ಯೋಜನೆ:

5 ವರ್ಷದಿಂದ ಇ-ಕೆವೈಸಿ (e-KYC) ಮಾಡಿಸದ ಪಡಿತರದಾರರು ಕೂಡಲೇ ಇ-ಕೆವೈಸಿ ಮಾಡಿಸಿ ಪಡಿತರ ಪಡೆಯಬೇಕು.ರದ್ದಾಗಿರುವ ಬಿಪಿಎಲ್ ಕಾರ್ಡ್‌ಗಳನ್ನು ಮರುಸ್ಥಾಪಿಸಲು 2-3 ವರ್ಷಗಳ ಐಟಿ ರಿಟರ್ನ್ಸ್, ಆದಾಯ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿದರೆ 1-2 ವಾರದಲ್ಲಿ ಪರಿಶೀಲಿಸಲಾಗುವುದು.ಇತ್ತೀಚೆಗೆ 15 ರಿಂದ 20 ಎಪಿಎಲ್ ಕಾರ್ಡ್‌ಗಳನ್ನು ಬಿಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ ಎಂದರು.

ಇತರ ಗ್ಯಾರಂಟಿ ಯೋಜನೆಗಳ ಪ್ರಗತಿ:

ಯುವನಿಧಿ: 11,499 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ಡಿಸೆಂಬರ್ ವರೆಗೆ ₹1.02 ಕೋಟಿಗೂ ಹೆಚ್ಚು ಹಣ ನೀಡಲಾಗಿದೆ. ಗೃಹಜ್ಯೋತಿ 1.77 ಲಕ್ಷ ಫಲಾನುಭವಿಗಳಿಗೆ ₹108 ಕೋಟಿಗೂ ಹೆಚ್ಚು ಸಬ್ಸಿಡಿ ಒದಗಿಸಲಾಗಿದೆ.ಶಕ್ತಿ ಯೋಜನೆಯಡಿ  ತಾಲ್ಲೂಕಿನಲ್ಲಿ ಈವರೆಗೆ ಮಹಿಳೆಯರು 2.54 ಕೋಟಿ ಬಾರಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular