HomeKarnatakaಯಜಮಾನಿಯರ ಗಮನಕ್ಕೆ : ಕೂಡಲೇ ಈ ಕೆಲಸ ಮಾಡಿ, ಬೇಗ ಬರುತ್ತೆ ‘ಗೃಹಲಕ್ಷ್ಮಿ’ 6 ನೇ...

ಯಜಮಾನಿಯರ ಗಮನಕ್ಕೆ : ಕೂಡಲೇ ಈ ಕೆಲಸ ಮಾಡಿ, ಬೇಗ ಬರುತ್ತೆ ‘ಗೃಹಲಕ್ಷ್ಮಿ’ 6 ನೇ ಕಂತಿನ ಹಣ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವರಿಗೆ ಹಣ ಬಂದಿಲ್ಲ. ಕೆಲವರಿಗೆ ಹಣ ಬಂದಿಲ್ಲ. ಇದುವರೆಗೂ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.

NPCI ಕಡ್ಡಾಯ

ಸದ್ಯ ರಾಜ್ಯ ಸರ್ಕಾರ ಗೃಹಲಕ್ಷ್ಮಿಯರಿಗೆ ಮಾಸಿಕ 2000 ರೂ ಹಣ ಪಡೆಯಲು ಹೊಸ ನಿಯಮ ರೂಪಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳಿಗೆ NPCI ಕಡ್ಡಾಯಗೊಳಿಸಿದೆ. ಹೌದು, ಗೃಹ ಲಕ್ಷ್ಮಿ ಫಲಾನುಭವಿಗಳು ಕಡ್ಡಾಯವಾಗಿ E -KYC , ಆಧಾರ್ ಸೀಡಿಂಗ್ ಮಾಡಿಸಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಹಣ ಪಡೆಯಲು NPCI ಕಡ್ಡಾಯವಾಗಿದೆ. NPCI ಆಗದಿದ್ದರೆ 6 ನೇ ಕಂತಿನ ಹಣ ಜಮಾ ಆಗಲ್ಲ. ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡುವ ಮೂಲಕ NPCI ಮಾಡಬಹುದು. ಆಧಾರ್ ಕಾರ್ಡ್, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ವಿವರಗಳನ್ನು ನೀಡಿದರೆ NPCI ಮಾಡಿಕೊಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯಡಿ ಖಾತೆಗೆ ಹಣ ಬಾರದೇ ಇರುವವರು ಮುಖ್ಯವಾಗಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ಇದನ್ನು ಮಾಡದಿದ್ದರೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬರಲ್ಲ. ಹೀಗಾಗಿ ಕೂಡಲೇ ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಿ.ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಕೆಲವು ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಬ್ಯಾಂಕ್ ಗೆ ಹೋಗಿ ಖಾತೆ ಆ್ಯಕ್ಟಿವ್ ಇದೆಯೋ ಇಲ್ಲವಾ ಪರಿಶೀಲಿಸಿ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular