HomeLatest Newsಬಸ್ ಮೆಟ್ಟಿಲಿನಿಂದ ಜಾರಿಬಿದ್ದ ರೋಹಿತ್ ಶರ್ಮಾ: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ!

ಬಸ್ ಮೆಟ್ಟಿಲಿನಿಂದ ಜಾರಿಬಿದ್ದ ರೋಹಿತ್ ಶರ್ಮಾ: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ!

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯದ ನಂತರ ಟೀಮ್ ಇಂಡಿಯಾದ ಹಿರಿಯ ಆಟಗಾರ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಅಪಾಯದಿಂದ ಕೂದಲೆಳೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ತಿರುವನಂತಪುರದಲ್ಲಿ ಪಂದ್ಯ ಮುಗಿಸಿ ತಂಡದ ಬಸ್‌ನಿಂದ ಕೆಳಗಿಳಿಯುವಾಗ ರೋಹಿತ್ ಕಾಲಾರಿ ಜಾರಿದ್ದು, ಪ್ರಸ್ತುತ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮೊದಲ ಏಕದಿನ ಪಂದ್ಯ ಮುಗಿಸಿ ತಂಡದ ಆಟಗಾರರು ಹೋಟೆಲ್ ತಲುಪಿದಾಗ ಈ ಘಟನೆ ನಡೆದಿದೆ. ಬಸ್‌ನಿಂದ ಕೆಳಗಿಳಿಯಲು ಮೆಟ್ಟಿಲು ಇಳಿಯುತ್ತಿದ್ದಂತೆ ರೋಹಿತ್ ಶರ್ಮಾ ಅವರ ಕಾಲು ಜಾರಿಬಿದ್ದಿದೆ. ತಕ್ಷಣವೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ರೋಹಿತ್ ಅವರತ್ತ ಧಾವಿಸಿ ಅವರು ಬೀಳದಂತೆ ಹಿಡಿದುಕೊಳ್ಳಲು ನೆರವಾದರು.

ಅದೃಷ್ಟವಶಾತ್, ರೋಹಿತ್ ಶರ್ಮಾ ತಕ್ಷಣವೇ ತಮ್ಮ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಅವರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮೆಟ್ಟಿಲುಗಳಿಂದ ಬೀಳುವ ಅಪಾಯವಿದ್ದರೂ, ಅವರು ಯಾವುದೇ ತೊಂದರೆಯಿಲ್ಲದೆ ನಡೆದುಕೊಂಡು ಹೋದರು. ಆದಾಗ್ಯೂ, 39 ವರ್ಷದ ನಾಯಕನಿಗೆ ಗಾಯದ ಭೀತಿ ಎದುರಾದದ್ದು ಅಭಿಮಾನಿಗಳನ್ನು ಕೆಲಕಾಲ ಆತಂಕಕ್ಕೀಡು ಮಾಡಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿರುವನಂತಪುರದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ 32 ರನ್‌ ಗಳಿಸಿ, ಮೊದಲ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಗೆಲುವಿಗೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular