HomeIndiaಬ್ಯಾಂಕ್ ಖಾತೆದಾರರು ಮೃತಪಟ್ಟರೆ ಹಣ ಯಾರಿಗೆ ಸಿಗುತ್ತೆ? RBI ನಿಯಮ ತಿಳಿಯಿರಿ

ಬ್ಯಾಂಕ್ ಖಾತೆದಾರರು ಮೃತಪಟ್ಟರೆ ಹಣ ಯಾರಿಗೆ ಸಿಗುತ್ತೆ? RBI ನಿಯಮ ತಿಳಿಯಿರಿ

ಬ್ಯಾಂಕ್ ಖಾತೆದಾರರು ಮೃತಪಟ್ಟ ಬಳಿಕ ಅವರ ಖಾತೆಯಲ್ಲಿರುವ ಹಣ ಏನಾಗುತ್ತದೆ ಎಂಬ ಪ್ರಶ್ನೆ ಹಲವರಲ್ಲಿರುತ್ತದೆ. ಆದರೆ ನಾಮಿನಿ ಅಥವಾ ಅರ್ಹ ಕುಟುಂಬ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಕ್ಲೇಮ್ ಸಲ್ಲಿಸಿ ಆ ಹಣವನ್ನು ಪಡೆಯಬಹುದು. ಈ ಪ್ರಕ್ರಿಯೆಯನ್ನು ಸರಳಗೊಳಿಸಿರುವ ಆರ್‌ಬಿಐ, ಅರ್ಹ ಕ್ಲೇಮ್‌ಗಳನ್ನು 15 ಕ್ಯಾಲೆಂಡರ್ ದಿನಗಳೊಳಗೆ ಇತ್ಯರ್ಥಪಡಿಸಲು ಕಾಲಮಿತಿ ನಿಗದಿಪಡಿಸಿದೆ. ಹಾಗಾದರೆ ಮೃತ ಖಾತೆದಾರರ ಹಣ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಬ್ಯಾಂಕ್ ಖಾತೆ ಹೊಂದಿರುವವರು ಮೃತಪಟ್ಟರೆ ಅವರ ಖಾತೆಯಲ್ಲಿರುವ ಹಣ ಏನಾಗುತ್ತದೆ ಎಂಬ ಅನುಮಾನ ಹಲವರಲ್ಲಿರುತ್ತದೆ. ಆದರೆ ಕುಟುಂಬ ಸದಸ್ಯರು ಅಥವಾ ನಾಮಿನಿಗಳು ಖಾತೆಯಲ್ಲಿರುವ ಹಣವನ್ನು ಕ್ಲೇಮ್ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಆರ್‌ಬಿಐ ಮತ್ತಷ್ಟು ಸರಳಗೊಳಿಸಿದೆ. 15 ದಿನಗಳೊಳಗೆ ಕ್ಲೇಮ್‌ ಅನ್ನು ಇತ್ಯರ್ಥಪಡಿಸಬಹುದು.

ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಬ್ಯಾಂಕ್ ಖಾತೆ ಹೊಂದಿರುವುದು ಬಹುತೇಕ ಅನಿವಾರ್ಯವಾಗಿದೆ. ದೈನಂದಿನ ಹಣಕಾಸು ವ್ಯವಹಾರಗಳನ್ನು ನಡೆಸಲು, ಸರ್ಕಾರದ ಕಲ್ಯಾಣ ಯೋಜನೆಗಳ ಹಣ ಹಾಗೂ ಸಬ್ಸಿಡಿ ಪಡೆಯಲು ಬ್ಯಾಂಕ್ ಖಾತೆ ಅಗತ್ಯವಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಬಹುತೇಕ ಎಲ್ಲರೂ ಬ್ಯಾಂಕ್ ಖಾತೆ ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಬ್ಯಾಂಕ್ ಖಾತೆದಾರರು ಮೃತಪಟ್ಟರೆ ಅವರ ಖಾತೆಯಲ್ಲಿರುವ ಹಣ ಏನಾಗುತ್ತದೆ ಎಂಬ ಅನುಮಾನ ಹಲವರಲ್ಲಿದೆ. ಖಾತೆದಾರರು ಮೃತಪಟ್ಟ ನಂತರವೂ ಅವರ ಖಾತೆಯಲ್ಲಿರುವ ಹಣ ಹಾಗೆಯೇ ಉಳಿಯುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಕುಟುಂಬ ಸದಸ್ಯರು ಅಥವಾ ನಾಮಿನಿಗಳು ನಿಯಮಾನುಸಾರ ಆ ಹಣವನ್ನು ಕ್ಲೇಮ್ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಸರಳಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.

ಕುಟುಂಬ ಸದಸ್ಯರು ಅಥವಾ ನಾಮಿನಿಗಳು ಕ್ಲೇಮ್ ಪಡೆಯಲು ನಿರ್ದಿಷ್ಟ ಕಾಲಮಿತಿಯನ್ನೂ ನಿಗದಿಪಡಿಸಲಾಗಿದೆ. ಇಂತಹ ಕ್ಲೇಮ್‌ಗಳ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಆರ್‌ಬಿಐ ಕ್ರಮ ಕೈಗೊಂಡಿದೆ.

3 ಸರಳ ಹಂತಗಳಲ್ಲಿ ಹಣ ಕ್ಲೇಮ್

ಮೃತ ಖಾತೆದಾರರ ಖಾತೆಯಲ್ಲಿರುವ ಹಣವನ್ನು ಕುಟುಂಬ ಸದಸ್ಯರು ಅಥವಾ ನಾಮಿನಿಗಳು ಮೂರು ಸರಳ ಹಂತಗಳಲ್ಲಿ ಕ್ಲೇಮ್ ಮಾಡಿಕೊಳ್ಳಬಹುದು.

ಮೊದಲ ಹಂತ: ನಿಮ್ಮ ಬ್ಯಾಂಕ್ ಶಾಖೆ ಅಥವಾ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಎರಡನೇ ಹಂತ: ಅಗತ್ಯವಿರುವ ಕ್ಲೇಮ್ ಅರ್ಜಿಯನ್ನು ಭರ್ತಿ ಮಾಡಬೇಕು.

ಮೂರನೇ ಹಂತ: ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಬಳಿಕ ಬ್ಯಾಂಕ್ ಸಿಬ್ಬಂದಿ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಖಾತೆಯಲ್ಲಿರುವ ಹಣವನ್ನು ಅರ್ಹ ವ್ಯಕ್ತಿಗೆ ಪಾವತಿಸುತ್ತಾರೆ.

15 ದಿನಗಳೊಳಗೆ ಕ್ಲೇಮ್ ಇತ್ಯರ್ಥ

ಕ್ಲೇಮ್ ಅರ್ಜಿಯನ್ನು 15 ಕ್ಯಾಲೆಂಡರ್ ದಿನಗಳೊಳಗೆ ಇತ್ಯರ್ಥಪಡಿಸಲು ಆರ್‌ಬಿಐ ಕಾಲಮಿತಿ ನಿಗದಿಪಡಿಸಿದೆ. ಖಾತೆದಾರರು ನಾಮಿನಿ ಅಥವಾ ನಾಮಿನಿಗಳ ವಿವರಗಳನ್ನು ಮುಂಚಿತವಾಗಿಯೇ ದಾಖಲಿಸಿದ್ದರೆ, ಕ್ಲೇಮ್ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿ ನಡೆಯುತ್ತದೆ ಎಂದು ಆರ್‌ಬಿಐ ಸೂಚಿಸಿದೆ. ಆದ್ದರಿಂದ ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಮಿನಿ ವಿವರಗಳನ್ನು ಕಡ್ಡಾಯವಾಗಿ ಅಪ್‌ಡೇಟ್ ಮಾಡಿಕೊಳ್ಳುವುದು ಮುಖ್ಯವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular