alex Certify ಮಹಾಶಿವರಾತ್ರಿ ದಿನದಂದು ಹೀಗಿರಲಿ ನಿಮ್ಮ ರುದ್ರಾಭಿಷೇಕ ಪೂಜಾ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾಶಿವರಾತ್ರಿ ದಿನದಂದು ಹೀಗಿರಲಿ ನಿಮ್ಮ ರುದ್ರಾಭಿಷೇಕ ಪೂಜಾ ವಿಧಾನ

ದೇವತೆಗಳಿಗೆ ವಿವಿಧ ರೀತಿಯ ಅಭಿಷೇಕವನ್ನ ಮಾಡುವ ಪದ್ಧತಿ ಹಿಂದೂ ಸಪ್ರದಾಯದಲ್ಲಿದೆ. ಇದೇ ರೀತಿ ಶಿವಲಿಂಗಕ್ಕೆ ನೀವು ಅಭಿಷೇಕವನ್ನ ಮಾಡಿದ್ರೆ ಅದನ್ನ ರುದ್ರಾಭಿಷೇಕ ಎಂದು ಕರೆಯಲಾಗುತ್ತೆ.

ಶ್ರಾವಣ ಮಾಸದ ಸೋಮವಾರ ಹಾಗೂ ಶಿವರಾತ್ರಿ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಶಿವನಿಗೆ ರುದ್ರಾಭಿಷೇಕವನ್ನ ಮಾಡಲಾಗುತ್ತೆ. ಈ ವರ್ಷದ ಮಹಾಶಿವರಾತ್ರಿ ಆಚರಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ನೀವು ಕೂಡ ಶಿವರಾತ್ರಿಯನ್ನ ಅದ್ಧೂರಿಯಾಗಿ ಆಚರಣೆ ಮಾಡಬೇಕು ಆದರೆ ರುದ್ರಾಭಿಷೇಕದ ಬಗ್ಗೆ ಮಾಹಿತಿ ಇಲ್ಲ ಎಂದು ತಲೆಕೆಡಿಸಿಕೊಂಡಿದ್ದರೆ ಈ ಸ್ಟೋರಿಯನ್ನ ನೀವು ನೋಡಲೇಬೇಕು. ರುದ್ರಾಭಿಷೇಕಕ್ಕೆ ಬೇಕಾಗುವ ಸಾಮಗ್ರಿ ಹಾಗೂ ವಿಧಿಯ ಬಗ್ಗೆ ಇಲ್ಲಿದೆ ಮಾಹಿತಿ.

ರುದ್ರಾಭಿಷೇಕಕ್ಕೆ ಬೇಕಾಗುವ ಸಾಮಗ್ರಿಗಳು: ಮರದಿಂದ ಮಾಡಿದ ಪುಟ್ಟ ಚೌಕಿ, ಚೌಕಿಯ ಮೇಲೆ ಹಾಸಲು ಹೊಸ ಶಾಲು, ಶಿವ ಲಿಂಗ, ಎಕ್ಕೆ ಹೂವು, ಕರವೀರ, ಕೋಟೆ ಹೂವು, ಬಿಳಿ ಬಣ್ಣದ ಹೂಗಳು, ಗುಲಾಬಿ ಹೂವು, ಬಿಲ್ವ ಪತ್ರೆ, ವೀಳ್ಯದೆಲೆ, ಅಡಿಕೆ, ಏಲಕ್ಕಿ ಹಾಗೂ ಲವಂಗ,  ದೂಪ/ ಅಗರಬತ್ತಿ, ದೂರ್ವೆ, ಬೆಂಕಿಪೊಟ್ಟಣ, ಎಣ್ಣೆ ಇಲ್ಲವೇ ತುಪ್ಪದ ದೀಪ, ಶುಭ್ರ ಹತ್ತಿ ಬಟ್ಟೆ, ಆರತಿ, ವಿಭೂತಿ, ಚಂದನ / ಗಂಧ, ಜನಿವಾರ, ಅಕ್ಷತೆ, ನೈವೇದ್ಯಕ್ಕೆ ಡ್ರೈ ಫ್ರೂಟ್​ ಇಲ್ಲವೇ ಹಣ್ಣುಗಳು, ಹಾಲು, ಬಾಳೆಹಣ್ಣು, ಪಂಚಾಮೃತ, ಜಲಾಧರ ಪಾತ್ರೆ, ತೆಂಗಿನಕಾಯಿ, ಬಿಳಿ ಬಣ್ಣದ ಬಟ್ಟೆ, ತೀರ್ಥದ ಗಿಂಡಿ, ನೀರು, ಗಂಗಾಜಲ, ಕಂಚಿನ ತಟ್ಟೆ, ಗಂಟೆ.

ರುದ್ರಾಭಿಷೇಕ ಮಾಡುವ ವಿಧಾನ: ಮರದ ಚೌಕಿಯ ಮೇಲೆ ಬಿಳಿ ಬಣ್ಣದ ಬಟ್ಟೆಯನ್ನ ಹಾಸಿ. ಇದರ ಮೇಲೆ ಕಂಚಿನ ತಟ್ಟೆಯನ್ನಿಟ್ಟು ಅದರ ಮೇಲೆ ಶಿವಲಿಂಗವನ್ನ ಕೂರಿಸಿ. ಈ ವೇಳೆ ಶಿವಲಿಂಗದ ಮುಖ ಉತ್ತರ ದಿಕ್ಕಿನಲ್ಲಿ ಇರುವಂತೆ ನೋಡಿಕೊಳ್ಳಿ. ತುಪ್ಪ ಇಲ್ಲವೇ ಎಣ್ಣೆಯ ದೀಪವನ್ನ ಶಿವಲಿಂಗದ ಬಲಗಡೆ ಬೆಳಗಿ.
ಟ್ರೇನಲ್ಲಿ ಎಲ್ಲಾ ಪೂಜಾ ಸಾಮಗ್ರಿಯನ್ನ ರೆಡಿ ಮಾಡಿಕೊಳ್ಳಿ. ಪೂಜೆ ಮಾಡುವವರು ಪೂರ್ವ ದಿಕ್ಕಿಗೆ ಮುಖ ಮಾಡಿ. ಪೂಜೆ ವೇಳೆ ಸಾಂಪ್ರದಾಯಿಕ ಉಡುಗೆ ಧರಿಸಲು ಮರೆಯದಿರಿ. ತೀರ್ಥದ ಗಿಂಡಿಯಿಂದ ಸ್ವಲ್ಪ ನೀರನ್ನ ತೆಗೆದು ಪೂಜಾ ಸಾಮಗ್ರಿ ಸುತ್ತ ಸಿಂಪಡಿಸಿ. ಈ ವೇಳೆ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಮಂತ್ರ ಪಠಿಸಿ.

ಪೂಜೆಗೂ ಮುನ್ನ ಗಣಪತಿ, ಶಿವ ಹಾಗೂ ನಿಮ್ಮ ಮನೆ ದೇವರನ್ನ ಸ್ಮರಿಸಿಕೊಳ್ಳಿ. ಓಂ ನಮಃ ಶಿವಾಯ ಹೇಳುತ್ತಲೇ ದೇವರಿಗೆ ಬಿಲ್ವಪತ್ರೆಯನ್ನ ಅರ್ಪಿಸಿ. ಅಕ್ಷತೆ ಹಾಗೂ ಹೂಗಳನ್ನ ಅರ್ಪಿಸಿ. ಈಗ ಶಿವಲಿಂಗವನ್ನ ಚೌಕಿಯಿಂದ ಪೂಜಾ ಸಾಮಗ್ರಿಯನ್ನ ಇಟ್ಟುಕೊಂಡಿದ್ದ ತಟ್ಟೆಯ ಮೇಲೆ ಇಡಿ. ರುದ್ರಾಭಿಷೇಕಕ್ಕೂ ಮುನ್ನ ಶಿವಲಿಂಗವನ್ನ ಬಿಲ್ವ ಪತ್ರೆಯ ಮೇಲಿಡಿ.

ಓಂ ನಮಃ ಶಿವಾಯ ಎನ್ನುತ್ತಲೇ ಶಿವಲಿಂಗಕ್ಕೆ ಅಕ್ಷತೆಯನ್ನ ಹಾಕಿ. ಇದಾದ ಬಳಿಕ ಪಂಚಾಮೃತವನ್ನ ಅರ್ಪಿಸಿ. ಬಳಿಕ ಗಂಗಾಜಲದಿಂದ ಅಭಿಷೇಕ ಮಾಡಿ. ಚಂದನದ ನೀರಿನಿಂದ ಅಭಿಷೇಕ ಮಾಡಿ. ಮತ್ತೆ ಅಕ್ಷತೆ ಕಾಳನ್ನು ಹಾಕಿ. ಹೂಗಳನ್ನ ಹಾಕಿ. ಜಲಾಧರ ಬಟ್ಟಲಿನಿಂದ ಹಾಲನ್ನ ಶಿವಲಿಂಗಕ್ಕೆ ಹಾಕಿ. ಇದಾದ ಬಳಿಕ ಗಂಗಾಜಲದ ಅಭಿಷೇಕ ಮಾಡಿ.

ಇದಾದ ಬಳಿಕ ಶಿವಲಿಂಗವನ್ನ ಸ್ವಚ್ಛಗೊಳಿಸಿ ಮತ್ತೆ ಚೌಕಿಯ ಮೇಲಿಡಿ. ಈ ವೇಳೆಯಲ್ಲೂ ಬಿಲ್ವ ಪತ್ರೆಯ ಮೇಲೆ ಶಿವಲಿಂಗ ಇಡೋಕೆ ಮರೆಯದಿರಿ. ಹತ್ತಿ ಬಟ್ಟೆಯಿಂದ ಶಿವಲಿಂಗವನ್ನ ಸ್ವಚ್ಛ ಮಾಡಿ. ಈಗ ಹೂಗಳು, ಬಿಲ್ವ ಪತ್ರೆಯನ್ನ ಮತ್ತೊಮ್ಮೆ ಅರ್ಪಿಸಿ. ಗಂಟೆ ಬಾರಿಸುತ್ತಾ ದೂಪವನ್ನ ಬೆಳಗಿ. ಹಣ್ಣು, ಲವಂಗ. ದಾಲ್ಚಿನಿ, ವೀಳ್ಯದಲೆಗಳ ಸುತ್ತ ನೀರನ್ನ ಸಿಂಪಡಿಸುವ ಮೂಲಕ ನೈವೇದ್ಯ ಮಾಡಿ.

ದೇವರಿಗೆ ಆರತಿಯನ್ನ ಬೆಳಗಿ ಬಳಿಕ ಲಿಂಗದ ಸುತ್ತ ಪ್ರದಕ್ಷಿಣೆ ಹಾಕಿ. ಹೂವನ್ನ ಅರ್ಪಿಸಿ ಶಿವಲಿಂಗಕ್ಕೆ ನಮಸ್ಕರಿಸಿ.

ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805

ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson

ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು

8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...