
ಗಣಪತಿಯನ್ನ ಆರಾಧಿಸೋಕು ಮುನ್ನ ನೀವು ಆತನಿಗೆ ಯಾವ ವಸ್ತುಗಳೆಂದರೆ ಇಷ್ಟ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಬುಧವಾರದ ದಿನದಂದು ನೀವು ಈ ವಸ್ತುಗಳನ್ನ ಗಣಪತಿಗೆ ಅರ್ಪಿಸಿದ್ರೆ ನಿಮ್ಮ ಸಕಲ ಕಷ್ಟಗಳೂ ದೂರಾಗಲಿವೆ ಎಂದು ಶಾಸ್ತ್ರ ಹೇಳಿದೆ.
ಮೊದಕ ನೈವೇದ್ಯ ಮಾಡಿ : ಗಣಪತಿಗೆ ಮೋದಕ ಅಂದ್ರೆ ತುಂಬಾನೇ ಇಷ್ಟ. ಹೀಗಾಗಿ ಬುಧವಾರ ಗಣೇಶನಿಗೆ ಮೋದಕವನ್ನ ನೈವೇದ್ಯ ಮಾಡಿ. ಬಿಳಿ ಮೋದಕವನ್ನ ಗಣೇಶನಿಗೆ ಅರ್ಪಿಸೋದ್ರಿಂದ ನಿಮ್ಮ ಮನೆ ಹಾಗೂ ಮನದಲ್ಲಿ ಶಾಂತಿ ನೆಲೆಸಲಿದೆ.
ಹಣದ ಸಮಸ್ಯೆ ನಿವಾರಣೆಯಾಗಲು ಮಂಗಳವಾರದಂದು ಈ ಎಲೆಗಳಿಂದ ಗಣಪತಿ ಪೂಜೆ ಮಾಡಿ
ಶಮಿ ಎಲೆಗಳನ್ನ ಅರ್ಪಿಸಿ : ಬುಧವಾರದಂದು ಗಣಪತಿಗೆ ಶಮಿ ಎಲೆಗಳನ್ನ ಅರ್ಪಿಸೋದ್ರಿಂದ ಜ್ಞಾನ ಹೆಚ್ಚಲಿದೆ ಎಂದು ಹೇಳಲಾಗುತ್ತೆ. ಅಲ್ಲದೇ ಮನೆಯಲ್ಲಿರುವ ಕೆಟ್ಟ ಶಕ್ತಿಗಳು ಇದರಿಂದ ದೂರಾಗಲಿವೆ.
ಹೂವುಗಳು ಹಾಗೂ ಕುಂಕುಮ : ಕೆಂಪು ಬಣ್ಣದ ಹೂವು ಗಣಪತಿಗೆ ಶ್ರೇಷ್ಠ ಎಂದು ಹೇಳಲಾಗುತ್ತೆ. ಹಾಗಂತ ನೀವು ಬೇರೆ ಬಣ್ಣದ ಹೂವುಗಳನ್ನೂ ಬಳಕೆ ಮಾಡಬಾರದು ಎಂದೇನಿಲ್ಲ. ಗಣೇಶನಿಗೆ ಕುಂಕುಮವನ್ನ ಹಚ್ಚಿದರೂ ಕೂಡ ಆತ ಪ್ರಸನ್ನನಾಗುತ್ತಾನೆ. ಇದರಿಂದ ನಿಮಗೆ ಪ್ರತಿ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ.
ದೂರ್ವೆಯನ್ನ ಅರ್ಪಿಸಿ : ಗಣಪತಿಗೆ ದೂರ್ವೆ ಅಂದರೆ ತುಂಬಾನೇ ಇಷ್ಟ. ಹೀಗಾಗಿ ಪೂಜೆ ವೇಳೆ ದೂರ್ವೆ ಇರೋದು ಕಡ್ಡಾಯ. ಈ ರೀತಿ ಮಾಡಿದ್ರೆ ಗಣೇಶನ ಅನುಗ್ರಹ ನಿಮ್ಮ ಮೇಲೆ ಸದಾ ಕಾಲ ಇರಲಿದೆ. ಹಾಗೆಯೇ ಗಣಪತಿಗೆ ತುಳಸಿಯನ್ನ ಅರ್ಪಿಸಲ್ಲ ಅನ್ನೋದನ್ನ ಮರೆಯದಿರಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003