ನಮ್ಮ ಜಾತಕದಲ್ಲಿ ಯಾವುದಾದರು ಗ್ರಹದೋಷವಿದ್ದರೆ ಜೀವನದಲ್ಲಿ ಸಫಲತೆಯನ್ನು ಕಾಣುವುದಿಲ್ಲ. ಹಾಗಾಗಿ ನಮ್ಮ ಗ್ರಹಗಳು ಶಾಂತವಾಗಿರಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೆವೆ. ಆದಕಾರಣ ಸೂರ್ಯಗ್ರಹದ ಅನುಗ್ರಹ ದೊರೆಯಲು ರವಿವಾರದಂದು ಈ ಕೆಲಗಳನ್ನು ಮಾಡಬಾರದು.
ರವಿವಾರದಂದು ಅರಳೀಮರಕ್ಕೆ ನೀರನ್ನು ಅರ್ಪಿಸಬೇಡಿ. ಇದರಿಂದ ದರಿದ್ರ ಆವರಿಸುತ್ತದೆ. ಹಾಗೇ ರವಿವಾರದಂದು ಸೂರ್ಯೋದಯಕ್ಕೂ ಮುನ್ನ ಎದ್ದೇಳಿ ಮತ್ತು ಸೂರ್ಯ ಹುಟ್ಟುವಾಗ ಸೂರ್ಯನಿಗೆ ಜಲವನ್ನು ಅರ್ಪಿಸಿ. ರವಿವಾರದಂದು ಕೂದಲಿಗೆ ಎಣ್ಣೆ ಹಚ್ಚುವುದು ಮತ್ತು ಕತ್ತರಿಸುವುದು ಮಾಡಬೇಡಿ.
ಶತ್ರು ಬಾಧೆ ನಿವಾರಣೆಗೆ ‘ಅಂಗಾರಕ ಚತುರ್ಥಿ’ ಯಾದ ಇಂದು ಮಾಡಿ ಈ ಪೂಜೆ
ಹಾಗೇ ರವಿವಾರದಂದು ಕೇಸರಿ ಬೇಳೆಯನ್ನು ತಿನ್ನಬಾರದಂತೆ. ಯಾಕೆಂದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗಿದೆ. ಈರುಳ್ಳಿ, ಹಾಗೇ ಬೆಳ್ಳುಳ್ಳಿ,ಶುಂಠಿ ಇವುಗಳನ್ನು ರವಿವಾರದಂದು ಸೇವಿಸಬಾರದಂತೆ. ಹಾಗೇ ರವಿವಾರದಂದು ಉಪ್ಪು ಮತ್ತು ಎಳ್ಳನ್ನು ಸೇವಿಸಬಾರದೆಂದು ಶಾಸ್ತ್ರದಲ್ಲಿ ತಿಳಿಸಲಾಗಿದೆಯಂತೆ.