ಹಿಂದೂ ಧರ್ಮದಲ್ಲಿ ರಾಮ ನವಮಿಯ ಹಬ್ಬಕ್ಕೆ ಬಹಳ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ರಾಮ ನವಮಿಯನ್ನು ಪವಿತ್ರ ಹಬ್ಬವೆಂದು ಪರಿಗಣಿಸಲಾಗಿದೆ. ಶ್ರೀ ರಾಮನಿಗೆ ಇದನ್ನು ಅರ್ಪಿಸಲಾಗಿದೆ. ರಾಮನವಮಿ ದಿನದಂದು ಜನರು ಭಗವಾನ್ ರಾಮನನ್ನು ಪೂಜಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಈ ಬಾರಿ ಏಪ್ರಿಲ್ 21ರಂದು ರಾಮನವಮಿ ಆಚರಿಸಲಾಗ್ತಿದೆ.
ನಾಡಿನೆಲ್ಲೆಡೆ ರಾಮನವಮಿ ಹಬ್ಬವನ್ನು ಭಕ್ತರು ಸರಳವಾಗಿ ಆಚರಿಸಲು ನಿರ್ಧರಿಸಿದ್ದಾರೆ. ರಾಮನವಮಿ ಹಬ್ಬವು ಪ್ರತಿವರ್ಷ ಚೈತ್ರ ಶುಕ್ಲ ಪಕ್ಷದ ನವಮಿಯಂದು ಆಚರಿಸಲಾಗುತ್ತದೆ. ಏಪ್ರಿಲ್ 21, ಬುಧವಾರ 11:02 ರಿಂದ ಮಧ್ಯಾಹ್ನ 1:38 ರವರೆಗೆ ರಾಮನವಮಿ ಆಚರಿಸಲು ಶುಭ ಮುಹೂರ್ತವಿದೆ.
ರಾಮನವಮಿ ದಿನದಂದು ಭಗವಾನ್ ಶ್ರೀ ರಾಮನನ್ನು ಪೂಜಿಸಲಾಗುತ್ತದೆ, ರಾಮನ ವಿಗ್ರಹಕ್ಕೆ ಗಂಗಾ ನೀರಿನಲ್ಲಿ ಸ್ನಾನ ಮಾಡಿಸಲಾಗುತ್ತದೆ. ಅವರ ವಿಗ್ರಹವನ್ನು ತೊಟ್ಟಿಲಲ್ಲಿ ಇಟ್ಟು ಪೂಜಿಸಲಾಗುತ್ತದೆ. ಈ ದಿನ ಭಕ್ತರು ರಾಮಾಯಣವನ್ನು ಮತ್ತು ರಾಮ ರಕ್ಷೆಯನ್ನು ಪಠಿಸುತ್ತಾರೆ. ಈ ದಿನ ರಾಮ ದೇವಸ್ಥಾನದಲ್ಲಿ ಭಗವಾನ್ ರಾಮನ ಭಜನಾ ಕೀರ್ತನೆಗಳನ್ನು ನಡೆಸಲಾಗುತ್ತಿತ್ತು. ಆದ್ರೆ ಈ ಬಾರಿ ಕೊರೊನಾ ವೈರಸ್ ಕಾರಣಕ್ಕೆ ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಸಲಹೆ ನೀಡಲಾಗಿದೆ.