ಕಾರ್ತಿಕ ಮಾಸ ಶುರುವಾಗಿದೆ. ಕಾರ್ತಿಕ ಮಾಸ ತುಂಬಾ ಪವಿತ್ರವಾದ ಮಾಸ. ಈ ಮಾಸದಲ್ಲಿ 3 ದಿನಗಳ ಕಾಲ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ಕೆಲಸ ಮಾಡಿದರೆ ಇಡೀ ಮಾಸದ ಪೂಜಾ ಫಲ ನಿಮಗೆ ಸಿಗುತ್ತದೆಯಂತೆ.
ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಪಾಪ ಕಳೆದು ಪುಣ್ಯ ಲಭಿಸುತ್ತದೆಯಂತೆ. ಈ ಕಾರ್ತಿಕ ಮಾಸದಲ್ಲಿ ಮುಂಜಾನೆ ಸೂರ್ಯೋದಯಕ್ಕೂ ಮುಂಚೆ ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಬೇಕು. ಕೆಲವರಿಗೆ ಪ್ರತಿದಿನ ಹೀಗೆ ಮಾಡಲು ಸಾಧ್ಯವಾಗದಿದ್ದರೆ ಈ 3 ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಈ ರೀತಿ ಪೂಜೆ ಮಾಡಿ.
ಮೊದಲನೇಯದಾಗಿ ಕಾರ್ತಿಕ ಮಾಸದ ಮೊದಲ ದಿನ, ಎರಡನೇಯದು ಕಾರ್ತಿಕ ಹುಣ್ಣಿಮೆ ದಿನ, ಮೂರನೇಯದು ಕಾರ್ತಿಕ ಮಾಸದ ಕೊನೆಯ ದಿನ. ಈ ಮೂರು ದಿನಗಳಲ್ಲಿ ಮುಂಜಾನೆ ಸೂರ್ಯೋದಯಕ್ಕೂ ಮುಂಚೆ ಎದ್ದು ನದಿಯಲ್ಲಿ ಸ್ನಾನ ಮಾಡಿ ಶಿವ ಕೇಶವರ ಪೂಜೆ ಮಾಡಿದರೆ ಇಡೀ ಮಾಸದಲ್ಲಿ ಪೂಜೆ ಮಾಡಿದ ಫಲ ನಿಮಗೆ ಸಿಗುತ್ತದೆಯಂತೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003