HomeLatest Newsಶಿಲ್ಪಾ ಗಣೇಶ್ ನಿರ್ಮಾಣದ 'ಪಿಚ್ಚರ್' ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ಕರಾವಳಿ ದಿಗ್ಗಜರ ಜುಗಲ್‌ಬಂದಿಗೆ ಪ್ರೇಕ್ಷಕರು ಫಿದಾ!

ಶಿಲ್ಪಾ ಗಣೇಶ್ ನಿರ್ಮಾಣದ ‘ಪಿಚ್ಚರ್’ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್: ಕರಾವಳಿ ದಿಗ್ಗಜರ ಜುಗಲ್‌ಬಂದಿಗೆ ಪ್ರೇಕ್ಷಕರು ಫಿದಾ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಗೆಯ ಸಿನಿಮಾಗಳ ಹವಾ ಜೋರಾಗಿದ್ದು, ಇದೀಗ ಆ ಸಾಲಿಗೆ ‘ಪಿಕ್ಚರ್’ ಸಿನಿಮಾ ಸೇರ್ಪಡೆಯಾಗಿದೆ. ಇತ್ತೀಚೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾದ ಈ ಚಿತ್ರದ ಅಧಿಕೃತ ಟ್ರೈಲರ್ ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಜಾಲತಾಣಗಳಲ್ಲಿ ಭಾರಿ ವೀಕ್ಷಣೆ ಪಡೆಯುತ್ತಿದೆ.

ಚಿತ್ರದ ಕಥೆ ಮತ್ತು ನಿರೂಪಣೆ ನೋಡುಗರ ಗಮನ ಸೆಳೆಯುವಂತಿದ್ದು, ಆಗಸ್ಟ್ 7ರಂದು ಈ ಸಿನಿಮಾ ರಾಜ್ಯಾದ್ಯಂತ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ‘ಗೋಲ್ಡನ್ ಮೂವೀಸ್’ ಬ್ಯಾನರ್‌ನಡಿ ಶಿಲ್ಪಾ ಗಣೇಶ್ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಸಂಕೀರ್ಣ ಹಾಗೂ ರೋಚಕ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ ಎಂಬ ಸುಳಿವನ್ನು ಟ್ರೈಲರ್ ನೀಡಿದೆ.

ಸಂದೀಪ ಬೆಡ್ರ ಅವರ ಬರಹ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ಮತ್ತು ಅಮೃತಾ ಸೂಡು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕರಾವಳಿಯ ಖ್ಯಾತ ಕಲಾವಿದರಾದ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್ ಹಾಗೂ ಭೋಜರಾಜ್ ವಾಮಂಜೂರು ಸೇರಿದಂತೆ ಹಲವು ಹಿರಿಯ ನಟರು ಅಭಿನಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿ ಮೂಡಿಬಂದಿದ್ದು, ಸಂತೋಷ್ ರೈ ಪತಾಜೆ ಮತ್ತು ಚಂದ್ರಶೇಖರ್ ಕೆ ಎಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಸ್ಯಾಮ್ಯುಯೆಲ್ ಅಬಿ ಅವರ ಸಂಗೀತ ನಿರ್ದೇಶನ, ರಾಜು ಆರ್ಯನ್ ಅವರ ಸಂಕಲನ ಹಾಗೂ ಹರಿ ನಾರಾಯಣ್ ಅವರ ಶಬ್ದಗ್ರಹಣ ಚಿತ್ರದ ತಾಂತ್ರಿಕ ಬಲವನ್ನು ಹೆಚ್ಚಿಸಿದೆ. ಕರಾವಳಿ ಕಲಾವಿದರ ಬಳಗ ಮತ್ತು ಉತ್ತಮ ತಾಂತ್ರಿಕ ತಂಡ ಒಂದಾಗಿರುವುದರಿಂದ ಸಿನಿಮಾ ಪ್ರಿಯರಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular