HomeKarnatakaಬಾಲಕಿ ಮೇಲೆ ಅತ್ಯಾಚಾರ: ಕೃತ್ಯಕ್ಕೆ ನೆರವಾದವರಿಗೂ 20 ವರ್ಷ ಕಠಿಣ ಶಿಕ್ಷೆ

ಬಾಲಕಿ ಮೇಲೆ ಅತ್ಯಾಚಾರ: ಕೃತ್ಯಕ್ಕೆ ನೆರವಾದವರಿಗೂ 20 ವರ್ಷ ಕಠಿಣ ಶಿಕ್ಷೆ

ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಪ್ರಚೋದನೆ ನೀಡಿದ ಆರೋಪ ಸಾಬೀತಾಗಿದೆ ಎಂದು ಅತ್ಯಾಚಾರ ಎಸಗಿದ ಆರೋಪಿಯ ಸಂಬಂಧಿಕರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ) ನ್ಯಾಯಾಧೀಶರು ಶಿಕ್ಷೆ ವಿಧಿಸಿದ್ದಾರೆ.

 ಕೊಪ್ಪಳ ತಾಲೂಕಾ ಗಿಣಿಗೇರಾ ಗ್ರಾಮದ ಪಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳು ಬಾಧಿತ ಬಾಲಕಿಯೊಂದಿಗೆ ಪಕ್ಕದ ಮನೆಯಲ್ಲಿ ವಾಸವಾಗಿದ್ದ ಪಂಜಾಬ್ ರಾಜ್ಯದ ಸರವನ್ ಸಿಂಗ್ ಒಂದು ವರ್ಷದಿಂದ ಬಾಲಕಿ ಮನೆಗೆ ಬಂದು ಹೋಗುತ್ತಿದ್ದ. ಬಾಲಕಿ ಜತೆಗೆ ಸಲುಗೆಯಿಂದ ಮಾತನಾಡುತ್ತ ಬಾಲಕಿಗೆ ಮೈ ಕೈ ಮುಟ್ಟಿ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳುತ್ತ ದಿ: 14-10-2020 ರಂದು ಬೆಳಗಿನ ಜಾವ 1 ಗಂಟೆಗೆ ಮನೆಯ ಹತ್ತಿರ ಬಂದು ಮೊಬೈಲ್ ಮೂಲಕ ಕರೆ ಮಾಡಿ ಹೊರಗೆ ಕರೆದು ತನ್ನೊಂದಿಗೆ ಬರದಿದ್ದರೆ ಗಲಾಟೆ ಮಾಡುವುದಾಗಿ ಹೆದರಿಸಿ ಟ್ಯಾಕ್ಸಿಯಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದ.

ಕೊಪ್ಪಳ, ಬಾಂಬೆ ಮೂಲಕ 2ನೇ ಆರೋಪಿ ಜೋಬನ್ ಸಿಂಗ್ ಸಹಾಯದಿಂದ ಪಂಜಾಬ್ ರಾಜ್ಯದ ಬಹಾನಿ ಬಡೆಸಾನ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಆರೋಪಿ 3-ಜಸ್ವಂತ್ ಸಿಂಗ್, 4-ಸರಬ್ಬಿತ್ ಸಿಂಗ್ ಹಾಗೂ 5-ಜಗತಾರ ಸಿಂಗ್  ಅವರೊಂದಿಗೆ ಕೂಡಿ ಬಾಧಿತ ಬಾಲಕಿಗೆ 20 ವರ್ಷ ಎಂದು ನ್ಯಾಯಾಲಯದಲ್ಲಿ ಅಫಿಡವಿಟ್ ಮಾಡಿಸಿ ದಿ: 16-10-2020 ರಂದು ಬಾಬಾ ಬಕಲ್ ಗ್ರಾಮದಲ್ಲಿನ ಗಂಗಾ ಮಾತಾಜಿ ಮಂದಿರದಲ್ಲಿ ಮದುವೆಯಾಗಿ ಅಮೃತಸರ ಪಟ್ಟಣದ ಸುಖಜ್ಯೋತಿ ಡಾಬಾದಲ್ಲಿ ಒಂದು ಕೊಠಡಿಯನ್ನು ಬಾಡಿಗೆ ಮಾಡಿ 1ನೇ ಆರೋಪಿ ಸರವನ್ ಸಿಂಗ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಈ ಆರೋಪದ ಹಿನ್ನೆಲೆಯಲ್ಲಿ ಕೊಪ್ಪಳ ಗ್ರಾಮೀಣ ಪೋಲಿಸ ಠಾಣೆಯ ಶರಣಪ್ಪ ಅಂಗಡಿ ಎ.ಎಸ್.ಐ ಇವರು ಬಾಧಿತಳ ತಂದೆ ನೀಡಿದ ದೂರನ್ನು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ರವಿ ಉಕ್ಕುಂದ ಸಿಪಿಐ ಕೊಪ್ಪಳ ವೃತ್ತ ಇವರು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಆರೋಪಿತರ ವಿರುದ್ಧ ನ್ಯಾಯಾಲಯ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

 ಈ ಪ್ರಕರಣವು ಸ್ಟೇ.ಎಸ್‌ಸಿ (ಪೋಕ್ಸೊ) ಸಂ: 09/2020 ರಲ್ಲಿ ದಾಖಲಾಗಿರುತ್ತದೆ. ವಿಚಾರಣಾ ಕಾಲಕ್ಕೆ 1ನೇ ಆರೋಪಿ ಸರವನಸಿಂಗ್ ಮೃತಪಟ್ಟಿರುತ್ತಾನೆ. ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿಯ ಕೃತ್ಯಕ್ಕೆ ಸಹಾಯ ಮಾಡಿದ 2ನೇ ಆರೋಪಿ ಜೋಬನ್ ಸಿಂಗ್ ಇತನ ಸಹಾಯದಿಂದ ಪಂಜಾಬ್ ರಾಹ ಬಹಾನಿ ಬಡೆಸಾನ್ ಗ್ರಾಮಕ್ಕೆ ಕರೆದುಕೊಂಡು ಹೋಗಿ ಆರೋಪಿ 3-ಜಸ್ವಂತ್ ಸಿಂಗ್, 4-ಸರಜ್ಜಿತ ಸಿಂಗ್ ಹಾಗೂ ಜಗತಾರ ಸಿಂಗ್ ಇವರ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ರೂ. 20,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿದೆ.

ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ) ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು 2026ರ ಮಾರ್ಚ್ 28 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಕರಾದ ಗೌರಮ್ಮ ದೇಸಾಯಿ ಅವರು ಸರ್ಕಾರದ ಪರ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.

ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಮಂಜುನಾಥ್ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular