ಬೆಂಗಳೂರು : ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ, ಬೆಂಗಳೂರು ಇವರು ಕರ್ನಾಟಕ ರಾಜ್ಯದ ಡಿಪ್ಲೊಮಾ ಕಾಲೇಜುಗಳಿಂದ ಕಳೆದ ಎರಡು ವರ್ಷಗಳಲ್ಲಿ (2022-23 ಮತ್ತು 2023-24) ಡಿ. ಫಾರ್ಮ (ಫಾರ್ಮಸಿಯಲ್ಲಿ ಡಿಪ್ಲೊಮಾ) ಪೂರ್ಣಗೊಳಿಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಂದ 11 ತಿಂಗಳ ಅವಧಿಗೆ ಅಪ್ರೆಂಟೀಸ್‌ಶಿಪ್ ತರಬೇತಿಗಾಗಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆಯು ಮೆರಿಟ್ ಆಧಾರದ ಮೇಲೆ ನಡೆಯಲಿದೆ.ಆಯ್ಕೆಯಾದ ವಿದ್ಯಾರ್ಥಿಗಳನ್ನು ಕೌನ್ಸಲಿಂಗ್ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (PHCs) ತರಬೇತಿಗೆ ನಿಯೋಜನೆ ಮಾಡಲಾಗುವುದು. ಅರ್ಜಿಯ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (http://kea.kar.nic.in) ಪಡೆಯಬಹುದು ಮತ್ತು ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಪ್ರಕಟಣೆಯ ದಿನಾಂಕ: 13.01.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27.01.2026.
ಕನಿಷ್ಠ ಅರ್ಹತೆ: ಕರ್ನಾಟಕದ ಕಾಲೇಜುಗಳಿಂದ ಮಾತ್ರ ಹಿಂದಿನ ಎರಡು
ವರ್ಷಗಳಲ್ಲಿ (2022-23 ಮತ್ತು 2023-24) ಡಿ. ಫಾರ್ಮದಲ್ಲಿ (ಫಾರ್ಮಸಿಯಲ್ಲಿ ಡಿಪ್ಲೊಮಾ) ಉತ್ತೀರ್ಣರಾಗಿರಬೇಕು. ಸರ್ಕಾರಿ ಕೋಟಾದಡಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಕರ್ನಾಟಕ ಸರ್ಕಾರದ ರೋಸರ್ ರೋಸ್ಟರ್ ಪದ್ಧತಿಯಂತೆ ಮೀಸಲಾತಿ ನಿಯಮಗಳನ್ನು ಅನುಸರಿಸಲಾಗುತ್ತದೆ.ಅಪ್ರೆಂಟಿಸ್‌ಶಿಪ್ ತರಬೇತಿ ಅವಧಿ ಮತ್ತು ಸ್ಟೈಫಂಡ್: 11 ತಿಂಗಳ ಅವಧಿಗೆ, ಪ್ರತಿ ತಿಂಗಳಿಗೆ ರೂ.8,000/- ಸ್ಟೈಪಂಡ್ ನೀಡಲಾಗುತ್ತದೆ.
ಆನ್‌ಲೈನ್ KEA ಅರ್ಜಿ ಶುಲ್ಕಗಳು: ರೂ. 600/-.


