HomeBusinessಬೆಂಗಳೂರಲ್ಲಿ ಏರ್ ಬಸ್ ಇಂಡಿಯಾ 2ನೇ ಅತಿ ದೊಡ್ಡ GCC ಉದ್ಘಾಟನೆ

ಬೆಂಗಳೂರಲ್ಲಿ ಏರ್ ಬಸ್ ಇಂಡಿಯಾ 2ನೇ ಅತಿ ದೊಡ್ಡ GCC ಉದ್ಘಾಟನೆ

ಜಾಗತಿಕ ಮಟ್ಟದ ಏರ್ ಬಸ್ ಇಂಡಿಯಾ ತಂತ್ರಜ್ಞಾನ ಕೇಂದ್ರದ 2ನೇ ಅತಿ ದೊಡ್ಡ GCC ಬೆಂಗಳೂರು ನಗದಲ್ಲಿ ಸ್ಥಾಪನೆಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಈ ಘಟಕವನ್ನು ಉದ್ಘಾಟನೆ ಮಾಡಿದರು.

ಈ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದು, ಕರ್ನಾಟಕದ ಬಾನಂಗಳದ ಹಿರಿಮೆ ಮತ್ತಷ್ಟು ವಿಸ್ತಾರಗೊಂಡಿದೆ. ಜಾಗತಿಕ ಮಟ್ಟದ ಏರ್ ಬಸ್ ಇಂಡಿಯಾ ತಂತ್ರಜ್ಞಾನ ಕೇಂದ್ರದ 2ನೇ ಅತಿ ದೊಡ್ಡ GCC ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದೆ ಎಂದು ಹೇಳಿದ್ದಾರೆ.

ಜಾಗತಿಕ ವಿಮಾನೋದ್ಯಮ ದಿಗ್ಗಜ ಏರ್ ಬಸ್ ತನ್ನ ಏರ್ ಬಸ್ ಇಂಡಿಯಾ ತಂತ್ರಜ್ಞಾನ ಕೇಂದ್ರ (Airbus India Technology Centre) ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದೆ. ಇದರೊಂದಿಗೆ ಕರ್ನಾಟಕದ ಬಾನಂಗಳದ ಹಿರಿಮೆ ಮತ್ತಷ್ಟು ವಿಸ್ತಾರಗೊಂಡಿದೆ ಎಂದು ಸಚಿವರು ಬಣ್ಣಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಏರ್ ಬಸ್ ಜಾಗತಿಕ ಮಟ್ಟದ ಎರಡನೇ ಅತಿದೊಡ್ಡ ಏರ್ ಬಸ್ ಇಂಡಿಯಾ ಟೆಕ್ನಾಲಜಿ ಸೆಂಟರ್ (ATC) ಅನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು (ವರ್ಚುವಲ್ ಮೂಲಕ) ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಚಿವ ಎಂ.ಬಿ.ಪಾಟೀಲ್ ಉದ್ಘಾಟಿಸಿದ್ದಾರೆ.

ಇದು ಭಾರತದ ವಿಶೇಷವಾಗಿ ಕರ್ನಾಟಕದ ತಾಂತ್ರಿಕ ಸಾಮರ್ಥ್ಯಕ್ಕೆ ಜಗತ್ತೇ ನೀಡಿರುವ ಗೌರವ. ಸುಮಾರು 8.8 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ, 5,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅವಕಾಶ ಕಲ್ಪಿಸುವ ಈ ಕೇಂದ್ರ ವಿಮಾನೋದ್ಯಮದ ಇಂಜಿನಿಯರಿಂಗ್, ಡಿಜಿಟಲ್ ತಂತ್ರಜ್ಞಾನ, ಗ್ರಾಹಕ ಸೇವೆ ಹಾಗೂ ಸಂಶೋಧನೆಯ ಜಾಗತಿಕ ಕೇಂದ್ರವಾಗಲಿದೆ.

ಇಲ್ಲಿ ಭಾರತೀಯ ಎಂಜಿನಿಯರ್‌ಗಳ ಬುದ್ಧಿಮತ್ತೆ ಜಾಗತಿಕ ವಿಮಾನಗಳ ವಿನ್ಯಾಸದಿಂದ ಆರಂಭಿಸಿ ಮುಂದಿನ ಪೀಳಿಗೆಯ ತಂತ್ರಜ್ಞಾನಗಳ ತನಕ ಮಹತ್ವದ ಪಾತ್ರ ವಹಿಸಲಿದೆ. ಇದು Make in India ಸಾಧನೆ ಅಲ್ಲ. Design in India, Innovate for the World ಎಂಬ ಹೊಸ ಅಧ್ಯಾಯದ ಆರಂಭ.

ಬೆಂಗಳೂರು ಈಗಾಗಲೇ ಐಟಿ ರಾಜಧಾನಿಯಾಗಿದೆ. ಜಾಗತಿಕ ಏರೋಸ್ಪೇಸ್ ಮತ್ತು ನವೀನತೆಯ ಕೇಂದ್ರವಾಗಿಯೂ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. ಭಾರತದ ಯುವ ಪ್ರತಿಭೆಗೆ ಇದು ಹೊಸ ಆಕಾಶದ ಬಾಗಿಲು ತೆರೆಯುವ ಘಟ್ಟ. ಕರ್ನಾಟಕದ ಬುದ್ಧಿಶಕ್ತಿ ಜಗತ್ತಿನ ಆಕಾಶವನ್ನು ರೂಪಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular