HomeKarnatakaBIG NEWS : ರಾಜ್ಯದಲ್ಲಿ ಸಾರ್ವಜನಿಕರ ದೂರುಗಳ ವಿಲೇವಾರಿಗೆ ಕಾಲಮಿತಿ ನಿಗದಿ : ಸರ್ಕಾರದಿಂದ ಮಹತ್ವದ...

BIG NEWS : ರಾಜ್ಯದಲ್ಲಿ ಸಾರ್ವಜನಿಕರ ದೂರುಗಳ ವಿಲೇವಾರಿಗೆ ಕಾಲಮಿತಿ ನಿಗದಿ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಅಧೀನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು ಹಾಗೂ ಮನವಿಗಳನ್ನು ಇನ್ನು ಮುಂದೆ ಅತ್ಯಂತ ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ವಿಲೇವಾರಿ ಮಾಡಲು ಸರ್ಕಾರ ಹೊಸ ಕಾಲಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.

21 ದಿನಗಳ ಗಡುವು: ಕೇಂದ್ರ ಸರ್ಕಾರದ ನಿರ್ದೇಶನದಂತೆ, ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಕುಂದುಕೊರತೆಗಳನ್ನು ವಿಲೇವಾರಿ ಮಾಡಲು ಗರಿಷ್ಠ 21 ದಿನಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ.

ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಧಿಕಾರಿಗಳನ್ನು ಮೂರು ಹಂತಗಳಲ್ಲಿ ವಿಂಗಡಿಸಲಾಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

L1 ಹಂತದ ಅಧಿಕಾರಿ: 07 ದಿನಗಳು.L2 ಹಂತದ ಅಧಿಕಾರಿ: 07 ದಿನಗಳು.

L3 ಹಂತದ ಅಧಿಕಾರಿ: 07 ದಿನಗಳು.

      ಸಂಯೋಜಿತ ವ್ಯವಸ್ಥೆ: ಈ ಪ್ರಕ್ರಿಯೆಯು iPGRS (Integrated Public Grievance Redressal System) ಮತ್ತು ಕೇಂದ್ರ ಸರ್ಕಾರದ CPGRAMS ತಂತ್ರಾಂಶದ ಮೂಲಕ ನಡೆಯಲಿದೆ.

      ಯಾರಿಗೆ ಅನ್ವಯ?: ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು, ಮಂಡಳಿಗಳು, ಪ್ರಾಧಿಕಾರಗಳು, ಅನುದಾನಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಉದ್ದಿಮೆಗಳಲ್ಲಿನ ಸೇವೆಗಳಿಗೆ ಈ ಆದೇಶ ಅನ್ವಯವಾಗುತ್ತದೆ.

      ಆದೇಶ ದಿನಾಂಕ  23:05:2025

      ದೂರುಗಳ ಗುಣಮಟ್ಟದ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವುದು ಆಯಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಇಲಾಖಾ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಜಿ. ಉಮಾದೇವಿ ತಿಳಿಸಿದ್ದಾರೆ.

      For Latest News Updates, Join Our Whatsapp Community🚩
      ranjith
      ranjith
      Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
      RELATED ARTICLES

      LEAVE A REPLY

      Please enter your comment!
      Please enter your name here

      Most Popular