HomeLatest NewsSHOCKING : ಬೆಚ್ಚಿ ಬೀಳಿಸೋ ಘಟನೆ : 3 ವರ್ಷದ ಮಗುವಿನ ಮೇಲೆ ಶಿಕ್ಷಕಿಯಿಂದ ಆ್ಯಸಿಡ್...

SHOCKING : ಬೆಚ್ಚಿ ಬೀಳಿಸೋ ಘಟನೆ : 3 ವರ್ಷದ ಮಗುವಿನ ಮೇಲೆ ಶಿಕ್ಷಕಿಯಿಂದ ಆ್ಯಸಿಡ್ ದಾಳಿ..!

ಆಂಧ್ರಪ್ರದೇಶ : ವಿಜಯವಾಡದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ಶಾಲೆಯೊಂದರಲ್ಲಿ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಆ್ಯಸಿಡ್ ದಾಳಿ ನಡೆದಿದೆ ಎಂದು ಮಗುವಿನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಶಾಲಾ ಶಿಕ್ಷಕಿಯೇ ಮಗುವಿನ ಮೇಲೆ ಆ್ಯಸಿಡ್ ಸುರಿದಿದ್ದಾರೆ ಎಂದು ಅವರು ದೂರಿದ್ದಾರೆ.ಫೆಬ್ರವರಿ 23 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಏನಿದು ಘಟನೆ

ಅಂದು ಬೆಳಿಗ್ಗೆ ತಾಯಿ ಮಗುವನ್ನು ಶಾಲೆಯಲ್ಲಿ ಬಿಟ್ಟು ಬಂದಿದ್ದರು. ಸ್ವಲ್ಪ ಸಮಯದ ನಂತರ ಶಾಲೆಯಿಂದ ಫೋನ್ ಬಂದಿದ್ದು, “ನಿಮ್ಮ ಮಗು ಬಾತ್ರೂಮ್ನಲ್ಲಿ ಬಿದ್ದಿದೆ” ಎಂದು ಶಿಕ್ಷಕಿ ಮಾಹಿತಿ ನೀಡಿದ್ದರು.ಈ ಘಟನೆಯಲ್ಲಿ ಮಗುವಿನ ಖಾಸಗಿ ಅಂಗಗಳಿಗೆ ತೀವ್ರವಾದ ಗಾಯಗಳಾಗಿವೆ. ಮಗು ಪ್ರಸ್ತುತ ಶೌಚಾಲಯಕ್ಕೂ ಹೋಗಲಾಗದ ಸ್ಥಿತಿಯಲ್ಲಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೈದ್ಯರ ದೃಢೀಕರಣ: ಮಗುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಇದು ಆ್ಯಸಿಡ್ ದಾಳಿಯಿಂದಾದ ಗಾಯಗಳೆಂದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಲಾ ಮಂಡಳಿಯ ನಿರ್ಲಕ್ಷ್ಯ ಮತ್ತು ಬೆದರಿಕೆ
ಶಾಲಾ ಆಡಳಿತ ಮಂಡಳಿಯು ಈ ವಿಷಯದಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಿದೆ ಎಂದು ಪೋಷಕರು ಆರೋಪಿಸಿದ್ದಾರೆ.ಘಟನೆ ಕುರಿತು ಪೋಷಕರು ಶಾಲೆಯನ್ನು ಪ್ರಶ್ನಿಸಿದಾಗ, ಮೊದಲು ರಾಜಿ ಮಾಡಿಕೊಳ್ಳಲು ಪ್ರಯತ್ನಿಸಲಾಯಿತು. ಅದಕ್ಕೆ ಒಪ್ಪದಿದ್ದಾಗ, “ನಮಗೆ ಪೊಲೀಸರು ಗೊತ್ತು, ಈ ವಿಷಯ ಹೊರಗೆ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಶಾಲಾ ಪ್ರಾಂಶುಪಾಲರು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತ ಕುಟುಂಬ ತಿಳಿಸಿದೆ.

ಪೊಲೀಸ್ ದೂರು
ಈ ಸಂಬಂಧ ವಿದ್ಯಾಧರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular