HomeLatest NewsBIG NEWS: ಏರ್ ಇಂಡಿಯಾದಿಂದ ಸಾಲು ಸಾಲು ಅವಾಂತರ: ತುರ್ತು ಸಭೆ ಕರೆದ DGCA

BIG NEWS: ಏರ್ ಇಂಡಿಯಾದಿಂದ ಸಾಲು ಸಾಲು ಅವಾಂತರ: ತುರ್ತು ಸಭೆ ಕರೆದ DGCA

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 274 ಜನರು ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಸಾಲು ಸಾಲು ಏರ್ ಇಂಡಿಯಾ ವಿಮಾನಗಳು ತಾಂತ್ರಿಕ ದೋಷ ಕಾರಣ ನೀಡಿ ತುರ್ತು ಭೂಸ್ಪರ್ಶವಾಗುತ್ತಿರುವ ಘಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಡಿಜಿಸಿಎ ತುರ್ತು ಸಭೆ ಕರೆದಿದೆ.

ಇಂದು ಒಂದೇ ದಿನ ಏರ್ ಇಂಡಿಯಾದ ಮೂರು ವಿಮಾನಗಳು ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲ್ಇ ತುರ್ತು ಭೂಸ್ಪರ್ಶ ಮಾಡಿವೆ. ಇದರ ಬೆನ್ನಲ್ಲೇ ಮೂರೂ ವಿಮಾನಗಳು ರದ್ದಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಡಿಜಿಸಿಎ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಭೆ ಕರೆದಿದೆ. ವಿಮಾನಯಾನ ಸಂಸ್ಥೆಯ ಜೊತೆ ಡಿಜಿಸಿಎ ಚರ್ಚೆ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular