HomeLatest NewsBIG NEWS: ವಿದ್ಯುತ್ ತಂತಿಗೆ ಪೊರಕೆ ತಾಗಿ ಬಾಲಕನಿಗೆ ಕರೆಂಟ್ ಶಾಕ್: ಸಾವು ಬದುಕಿನ ನಡುವೆ...

BIG NEWS: ವಿದ್ಯುತ್ ತಂತಿಗೆ ಪೊರಕೆ ತಾಗಿ ಬಾಲಕನಿಗೆ ಕರೆಂಟ್ ಶಾಕ್: ಸಾವು ಬದುಕಿನ ನಡುವೆ ಹೋರಾಟ

ಬೆಂಗಳೂರು: ಬೆಸ್ಕಾಂ ನಿರ್ಲಕ್ಷಕ್ಕೆ ಬಾಲಕ ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಘಟನೆ ನಡೆದಿದೆ. ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ಪೊರಕೆ ತಾಗಿ ಕರೆಂಟ್ ಶಾಕ್ ಹೊಡೆದು ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಕೆ.ಆರ್ ಪುರಂ ನ ಸ್ವತಂತ್ರನಗರದಲ್ಲಿ ನಡೆದಿದೆ.

ಇಲ್ಲಿನ ಬಸವನಪುರ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಬಾಲಕ ಪೊರಕೆ ಬಿಸಾಕಲು ಹೋಗಿದ್ದ. ಈ ವೇಳೆ ಪೊರಕೆಗೆ ವಿದ್ಯುತ್ ತಂತಿ ತಗುಲಿ, ವಿದ್ಯುತ್ ಪ್ರವಹಿಸಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳು ಬಾಲಕನನ್ನು ವಿಕ್ಟೊರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular