
ನಟಿ ಲೀಲಾವತಿ ಭಾರತ ಕಂಡ ಶ್ರೇಷ್ಠ ಕಲಾವಿದೆ , ಪಶು ಆಸ್ಪತ್ರೆ ಕಟ್ಟಿಸುವುದು ಸೇರಿದಂತೆ ಹಲವು ಸಮಾಜ ಸೇವೆ ಮಾಡಿ ಹೋಗಿದ್ದಾರೆ. ವಿನೋದ್ ರಾಜ್ ಕುಮಾರ್ ಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ನಟ ಉಪೇಂದ್ರ ಭಾವುಕರಾಗಿ ಮಾತನಾಡಿದ್ದಾರೆ.
ಹಿರಿಯ ನಟಿ ಲೀಲಾವತಿ ಶುಕ್ರವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.ಇಂದು ಸಂಜೆ ಅವರ ಅಂತ್ಯಕ್ರಿಯೆ ನೆರವೇರಲಿದೆ.

