HomeEntertainment"ಅಪ್ಪ, ಯೋಗಿ ಅನ್ನೋದು ಒಳ್ಳೆ ಹೆಸರಲ್ವಾ? ಯಾಕೆ ಲೂಸ್ ಅಂತಾರೆ?": ಮಗಳ ಮುದ್ದಾದ ಪ್ರಶ್ನೆಗೆ ನಟ...

“ಅಪ್ಪ, ಯೋಗಿ ಅನ್ನೋದು ಒಳ್ಳೆ ಹೆಸರಲ್ವಾ? ಯಾಕೆ ಲೂಸ್ ಅಂತಾರೆ?”: ಮಗಳ ಮುದ್ದಾದ ಪ್ರಶ್ನೆಗೆ ನಟ ಯೋಗಿ ಕೊಟ್ಟ ಉತ್ತರವೇನು ಗೊತ್ತಾ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ತನ್ನದೇ ಆದ ವಿಶಿಷ್ಟ ಮ್ಯಾನರಿಸಂ ಹಾಗೂ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟ ಯೋಗಿ, ಚಿತ್ರರಂಗದಲ್ಲಿ ಯಶಸ್ವಿಯಾಗಿ 20 ವರ್ಷಗಳ ಸುದೀರ್ಘ ಸಿನಿ ಪಯಣವನ್ನ ಪೂರೈಸುತ್ತಿದ್ದಾರೆ. ದುನಿಯಾ ಸೂರಿ ನಿರ್ದೇಶನದ, ದುನಿಯಾ ವಿಜಯ್ ನಟನೆಯ ಸೂಪರ್ ಹಿಟ್ ಸಿನಿಮಾ ʻದುನಿಯಾʼ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಯೋಗಿ, ಮೊದಲ ಚಿತ್ರದಲ್ಲೇ ಲೂಸ್‌ ಮಾದ ಎಂಬ ವಿಭಿನ್ನ ಪಾತ್ರದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದರು. ಆ ನಂತರ ಅದೇ ಹೆಸರಿನಿಂದಲೇ ಅತ್ಯಂತ ಜನಪ್ರಿಯರಾದರು.

ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ವೊಂದರ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟ ಯೋಗಿ, ತಮ್ಮ ಮುದ್ದಾದ ಮಗಳು ತಮಗೆ ಕೇಳುವ ಪ್ರಶ್ನೆಯೊಂದನ್ನು ನೆನೆದು ತಮ್ಮ ವೈಯಕ್ತಿಕ ಬದುಕಿನ ವಿಶೇಷ ಕ್ಷಣವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

“ಅಪ್ಪಾ.. ಯೋಗಿ ಅನ್ನೋದು ಒಳ್ಳೆ ಹೆಸರಲ್ವಾ?”

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂದರ್ಶನದಲ್ಲಿ ಮಾತನಾಡಿದ ಯೋಗಿ, “ಇತ್ತೀಚೆಗೆ ನನ್ನ ಮಗಳು ನನ್ನನ್ನು ಕೇಳೋದಕ್ಕೆ ಶುರು ಮಾಡಿದ್ದಾಳೆ; ಯಾಕೆ ನಿನ್ನ ಲೂಸ್‌ ಅಂತ ಕರೀತಾರೆ?’ ಅಂತ. ಅದಕ್ಕೆ ನಾನು, ‘ಇಲ್ಲ ಚುಮ್ಮಿ, ನಾನು ಸಿನಿಮಾ ಮಾಡಿದ್ನಲ್ಲ, ಅದರಲ್ಲಿ ನನ್ನ ಕ್ಯಾರೆಕ್ಟರ್‌ ಹೆಸರು ಲೂಸ್‌ ಮಾದ ಅಂತ ಇತ್ತು, ಅದಕ್ಕೆ ಹಂಗೆ ಕರೀತಾರೆ’ ಅಂತ ತಿಳಿಹೇಳಿದೆ. ಆದರೂ ಅವಳು, ‘ಅಪ್ಪ, ಯೋಗಿ ಅನ್ನೋದು ಒಳ್ಳೆಯ ಹೆಸರು ಅಲ್ವಾ?’ ಅಂತ ರಿಯಾಕ್ಟ್‌ ಮಾಡ್ತಾಳೆ ಎಂದು ಲೂಸ್‌ ಮಾದ ಯೋಗಿ ಹೇಳಿಕೊಂಡಿದ್ದಾರೆ.

ನಟ ಯೋಗಿ ಅವರು 2017ರಲ್ಲಿ ತಮ್ಮ ಬಹುಕಾಲದ ಗೆಳತಿ ಸಾಹಿತ್ಯ ಅರಸ್‌ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ದಂಪತಿಗೆ ‘ಶ್ರೀನಿಕಾ’ ಎಂಬ ಮುದ್ದಾದ ಮಗಳಿದ್ದಾಳೆ.

ಪೋಷಕ ನಟನಿಂದ ಸ್ಯಾಂಡಲ್‌ವುಡ್ ಸ್ಟಾರ್ ನಟನವರೆಗೆ

ಪ್ರಸಿದ್ಧ ನಿರ್ಮಾಪಕ ಟಿ.ಪಿ. ಸಿದ್ದರಾಜು ಅವರ ಪುತ್ರ ಹಾಗೂ ನಟ ದುನಿಯಾ ವಿಜಯ್‌ ಅವರ ಸೋದರಳಿಯನಾಗಿರುವ ಯೋಗಿ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಪೋಷಕ ನಟನಾಗಿ. ಆದರೆ ತಮ್ಮ ಅದ್ಭುತ ನಟನಾ ಸಾಮರ್ಥ್ಯದಿಂದಾಗಿ ಮುಂದೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು.

ಸೂಪರ್ ಹಿಟ್ ಸಿನಿಮಾಗಳು: ಪೋಷಕ ನಟನಾಗಿ ಬಂದ ಯೋಗಿ ಆ ನಂತರ ನಂದ ಲವ್ಸ್‌ ನಂದಿತ, ರಾವಣ, ಅಂಬಾರಿ, ಹಾಗೂ ʻಹುಡುಗರುʼ ನಂತಹ ಸಾಲು ಸಾಲು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿ ಸ್ಯಾಂಡಲ್‌ವುಡ್‌ನ ಭರವಸೆಯ ನಾಯಕ ನಟನಾಗಿ ಬೆಳೆದರು.

ವಿಭಿನ್ನ ಪ್ರಯೋಗಗಳು: ಕೇವಲ ಮಾಸ್‌ ಪಾತ್ರಗಳಿಗಷ್ಟೇ ಸೀಮಿತವಾಗದೆ, ವಿಭಿನ್ನ ಪ್ರಯೋಗಗಳ ಮೂಲಕ ಪ್ರೇಕ್ಷಕರನ್ನ ರಂಜಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ರಿಲೀಸ್‌ ಆದ, ವಿನಯ್‌ ರಾಜ್‌ಕುಮಾರ್‌ ನಟನೆಯ ಗ್ರಾಮಾಯಣ ಸಿನಿಮಾದಲ್ಲೂ ಯೋಗಿ ವಿಶೇಷ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಕಿರುತೆರೆ ಜರ್ನಿ: ಕೇವಲ ಬೆಳ್ಳಿತೆರೆಯಷ್ಟೇ ಅಲ್ಲದೆ, ಕಿರುತೆರೆಯಲ್ಲೂ ಯೋಗಿ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಸಿದ್ಧ ವಾಹಿನಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ʻಗಾನಾ ಬಜಾನಾʼ ಕಾರ್ಯಕ್ರಮದಲ್ಲಿ ಯೋಗಿ ಯಶಸ್ವಿ ನಿರೂಪಕನಾಗಿ (Anchor) ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular