HomeLatest NewsBREAKING : 'ಬಿಗ್ ಬಾಸ್' ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ...

BREAKING : ‘ಬಿಗ್ ಬಾಸ್’ ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ : ದೂರು ದಾಖಲು

ಬೆಂಗಳೂರು : ಬಿಗ್ ಬಾಸ್-12 ರಿಯಾಲಿಟಿ ಶೋ ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ರಣಹದ್ದು ಸಂರಕ್ಷಣಾ ಟ್ರಸ್ಟ್ ಡಿಎಫ್ಒಗೆ ದೂರು ನೀಡಿದೆ.

ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು’ ಎಂಬ ಪದ ಬಳಕೆ ಮಾಡಿದ್ದಾರೆ.ಸುದೀಪ್ ಈ ಪದ ಬಳಕೆ ಮಾಡಿದ್ದು ತಪ್ಪು . ಈ ಬಗ್ಗೆ ಪ್ರೇಕ್ಷಕರಿಗೆ ನಟ ಸುದೀಪ್ ಕ್ಲಾರಿಟಿ ಕೊಡಲಿ, ಸರಿಯಾದ ವಿವರಣೆ ಕೊಡಲಿ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿದೆ. ಬೆಂಗಳೂರು ದಕ್ಷಿಣ ಡಿಎಫ್ಒ ರಾಮಕೃಷ್ಣಪ್ಪಗೆ ದೂರು ನೀಡಲಾಗಿದೆ.

ಹದ್ದು ಯಾವಾಗಲೂ ಜೀವಂತ ಪ್ರಾಣಿಗಳನ್ನ ಬೇಟಿಯಾಡಲ್ಲ. ಸತ್ತ ಪ್ರಾಣಿಗಳನ್ನ ಬೇಟೆಯಾಗುತ್ತದೆ. ಈ ಮೂಲಕ ಪರಿಸರವನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತದೆ. ಆದರೆ ಸುದೀಪ್ ಅವರು ಬಿಗ್ ಬಾಸ್ ಶೋನಲ್ಲಿ  ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಹಿಡಿಯುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಹಾಗೆ ಹದ್ದು ಆ ತರಹದ ಪಕ್ಷಿ ಅಲ್ಲ..ಸುದೀಪ್  ವೀಕ್ಷಕರಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಬೇಕು ಎಂದು ದೂರಿನಲ್ಲಿ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular