HomeRecipiesಬ್ಯಾಚುಲರ್ಸ್ ಹಾಗೂ ಉದ್ಯೋಗಿಗಳಿಗೆ ಬೆಸ್ಟ್ ಅಡುಗೆ: ಐದೇ ನಿಮಿಷದಲ್ಲಿ ಮಾಡಿ ಸೂಪರ್ ಟೇಸ್ಟಿ ಪನೀರ್ ಪುಲಾವ್

ಬ್ಯಾಚುಲರ್ಸ್ ಹಾಗೂ ಉದ್ಯೋಗಿಗಳಿಗೆ ಬೆಸ್ಟ್ ಅಡುಗೆ: ಐದೇ ನಿಮಿಷದಲ್ಲಿ ಮಾಡಿ ಸೂಪರ್ ಟೇಸ್ಟಿ ಪನೀರ್ ಪುಲಾವ್

ಕೆಲವೊಮ್ಮೆ ದಿನವಿಡೀ ಕೆಲಸ ಮಾಡಿ ಸುಸ್ತಾದಾಗ ಅಥವಾ ಅಡುಗೆ ಮಾಡಲು ಅಷ್ಟಾಗಿ ಸಮಯವಿಲ್ಲದಿದ್ದಾಗ ಸುಲಭವಾಗಿ ಮತ್ತು ಅಷ್ಟೇ ರುಚಿಕರವಾಗಿ ಏನಾದರೂ ಮಾಡಬೇಕು ಎನಿಸುವುದು ಸಹಜ. ಅಂತಹ ಸಂದರ್ಭಗಳಲ್ಲಿ ಕೇವಲ ಒಂದೇ ಪಾತ್ರೆಯಲ್ಲಿ ಜಟ್ಪಟ್ ಎಂದು ಮಾಡಬಹುದಾದ ಅಡುಗೆ ಎಂದರೆ ಅದು ಅಚಾರಿ ಪನೀರ್ ಪುಲಾವ್. ಉಪ್ಪಿನಕಾಯಿಯ ಖಾರ ಮತ್ತು ಹುಳಿ ಮಿಶ್ರಿತ ಮಸಾಲೆಯೊಂದಿಗೆ ಪನೀರ್ ಸೇರಿಸಿ ಮಾಡುವ ಈ ಪುಲಾವ್ ನಾಲಿಗೆಗೆ ಹೊಸ ರುಚಿ ನೀಡುತ್ತದೆ. ಇದನ್ನು ರಾಯ್ತಾ ಅಥವಾ ನಿಮ್ಮ ನೆಚ್ಚಿನ ಚಟ್ನಿ ಜೊತೆಗೆ ಸವಿಯಬಹುದು.

ಬೇಕಾಗುವ ಪದಾರ್ಥಗಳು

  • ಪನೀರ್ – ೩೦೦ ಗ್ರಾಂ (ಚೌಕಾಕಾರವಾಗಿ ಕತ್ತರಿಸಿದ್ದು)
  • ಅಕ್ಕಿ – ೨ ಕಪ್
  • ಎಣ್ಣೆ – ೧ ದೊಡ್ಡ ಚಮಚ
  • ನಿಂಬೆಹಣ್ಣು ಅಥವಾ ಹಸಿರು ಮೆಣಸಿನಕಾಯಿ ಉಪ್ಪಿನಕಾಯಿ – ೧ ರಿಂದ ೨ ದೊಡ್ಡ ಚಮಚ
  • ಜೀರಿಗೆ – ೧ ಚಮಚ
  • ಸೋಂಪು – ೧ ಚಮಚ
  • ಕರಿಜೀರಿಗೆ (ಕಲೋಂಜಿ) – ೧ ಚಮಚ
  • ಕಾಳುಮೆಣಸು – ೪ ರಿಂದ ೫
  • ಬಿರಿಯಾನಿ ಎಲೆ – ೧ ರಿಂದ ೨
  • ದಪ್ಪ ಮೆಣಸಿನಕಾಯಿ (ಕ್ಯಾಪ್ಸಿಕಂ) – ೧ ಕಪ್ (ಹಸಿರು, ಹಳದಿ, ಕೆಂಪು ಬಣ್ಣದ್ದು)
  • ಮೊಸರು – ಅರ್ಧ ಕಪ್
  • ಅಚ್ಚಖಾರದ ಪುಡಿ – ೧ ಚಮಚ
  • ಅರಿಶಿನ ಪುಡಿ – ಅರ್ಧ ಚಮಚ
  • ನೀರು – ೩ ರಿಂದ ೪ ಕಪ್
  • ಉಪ್ಪು – ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ ಮೊದಲಿಗೆ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಜೀರಿಗೆ, ಕಲೋಂಜಿ, ಸೋಂಪು, ಕಾಳುಮೆಣಸು ಮತ್ತು ಬಿರಿಯಾನಿ ಎಲೆಯನ್ನು ಹಾಕಿ ಕೈಯಾಡಿಸಿ. ಮಸಾಲೆ ಪದಾರ್ಥಗಳು ಚಟಪಟ ಎಂದಾಗ ಉರಿಯನ್ನು ಕಡಿಮೆ ಮಾಡಿ ಅಚ್ಚಖಾರದ ಪುಡಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ತಕ್ಷಣವೇ ಮೊಸರನ್ನು ಹಾಕಿ ಚೆನ್ನಾಗಿ ಕೈಯಾಡಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಾದ ನಂತರ ಇದಕ್ಕೆ ಉಪ್ಪಿನಕಾಯಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಒಂದು ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ. ನಂತರ ತೊಳೆದ ಅಕ್ಕಿ, ಪನೀರ್ ತುಂಡುಗಳು ಮತ್ತು ಕತ್ತರಿಸಿದ ಕ್ಯಾಪ್ಸಿಕಂ ಹಾಕಿ ಮಸಾಲೆಯೊಂದಿಗೆ ಮೃದುವಾಗಿ ಮಿಶ್ರಣ ಮಾಡಿ. ಈಗ ಇದಕ್ಕೆ ೩ ರಿಂದ ೪ ಕಪ್ ನೀರನ್ನು ಸೇರಿಸಿ.

ಮಧ್ಯಮ ಉರಿಯಲ್ಲಿ ನೀರೆಲ್ಲಾ ಇಂಗುವವರೆಗೆ ಮತ್ತು ಅನ್ನ ಚೆನ್ನಾಗಿ ಬೇಯುವವರೆಗೆ ಮುಚ್ಚಳ ಮುಚ್ಚಿ ಬೇಯಿಸಿ. ಅನ್ನ ಸಂಪೂರ್ಣವಾಗಿ ಬೆಂದ ನಂತರ ಮೇಲಿನಿಂದ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿಬಿಸಿಯಾದ ಮಸಾಲೆಯುಕ್ತ ಅಚಾರಿ ಪನೀರ್ ಪುಲಾವ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular