HomeEntertainmentರಹಸ್ಯ ಮದುವೆ ವದಂತಿಗೆ ನಟಿ ಕಂಗನಾ ರಣಾವತ್ ಬ್ರೇಕ್: ವೈರಲ್ ಆದ ಮಂಗಳಸೂತ್ರದ ಹಿಂದಿದೆ ಬಿಗ್...

ರಹಸ್ಯ ಮದುವೆ ವದಂತಿಗೆ ನಟಿ ಕಂಗನಾ ರಣಾವತ್ ಬ್ರೇಕ್: ವೈರಲ್ ಆದ ಮಂಗಳಸೂತ್ರದ ಹಿಂದಿದೆ ಬಿಗ್ ಅಪ್ಡೇಟ್

ಬಾಲಿವುಡ್ ನಟಿ ಮತ್ತು ಸಂಸದೆ ಕಂಗನಾ ರಣಾವತ್ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಕಂಗನಾ ಕತ್ತಿನಲ್ಲಿ ಮಂಗಲಸೂತ್ರ ಮತ್ತು ಕೈಯಲ್ಲಿ ಹಸಿರು ಬಳೆಗಳನ್ನು ಧರಿಸಿ ಸಾರಜನಿಕವಾಗಿ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರೆಯೇ ಎಂಬ ಚರ್ಚೆಗಳು ಇಂಟರ್ನೆಟ್ ನಲ್ಲಿ ಜೋರಾಗಿ ನಡೆಯುತ್ತಿವೆ.

ಏನಿದು ವಿಡಿಯೋದ ಹಿನ್ನೆಲೆ

ಕಂಗನಾ ರಣಾವತ್ ಅವರ ಭದ್ರತಾ ಸಿಬ್ಬಂದಿಯೊಂದಿಗೆ ನಡೆದು ಹೋಗುತ್ತಿರುವ ವಿಡಿಯೋ ವೈರಲ್ ಆದ ತಕ್ಷಣ, ಅವರು ಗುಟ್ಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ ಈ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಕಂಗನಾ ರಣಾವತ್ ಸದ್ಯಕ್ಕೆ ಮದುವೆಯಾಗಿಲ್ಲ. ವೈರಲ್ ಆಗಿರುವ ಅವರ ಈ ವೇಷಭೂಷಣ ಅವರ ಮುಂಬರುವ ಹೊಸ ಚಿತ್ರದ ಶೂಟಿಂಗ್ ಗೆ ಸಂಬಂಧಿಸಿದ್ದಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ವೀನ್ 2 ಚಿತ್ರದ ವದಂತಿ ಮತ್ತು ಅಸಲಿ ಸತ್ಯ

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಕ್ವೀನ್ ಸಿನಿಮಾದ ಮುಂದುವರಿದ ಭಾಗವಾದ ಕ್ವೀನ್ ಫಾರೆವರ್ ಚಿತ್ರದ ಶೂಟಿಂಗ್ ಇರಬಹುದು ಎಂದು ವರದಿಯಾಗುತ್ತಿತ್ತು. ಆದರೆ ಈ ಸಾಂಪ್ರದಾಯಿಕ ಲುಕ್ ಕ್ವೀನ್ ಚಿತ್ರದ್ದಲ್ಲ. ಕಂಗನಾ ರಣಾವತ್ ಅವರು ಮುಂಬೈನಲ್ಲಿ ಭಾರತ್ ಭಾಗ್ಯ ವಿಧಾತ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಆ ಸಿನಿಮಾದ ಪಾತ್ರಕ್ಕಾಗಿ ಈ ವಿಶೇಷ ಶೈಲಿಯಲ್ಲಿ ಸಜ್ಜಾಗಿದ್ದಾರೆ. ಮರಾಠಿ ಸಂಸ್ಕೃತಿಯನ್ನು ಹೋಲುವ ಹಸಿರು ಬಳೆಗಳು ಮತ್ತು ಮಂಗಲಸೂತ್ರದ ಈ ನೋಟವು ಭಾರತ್ ಭಾಗ್ಯ ವಿಧಾತ ಚಿತ್ರದ ಕಥೆಗೆ ಪೂರಕವಾಗಿದೆ.

ಚಿತ್ರಗಳ ಬಿಡುಗಡೆ ವಿವರ

೨೦೧೩ ರಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿದ್ದ ಕ್ವೀನ್ ಚಿತ್ರದ ಮುಂದಿನ ಭಾಗದ ಚಿತ್ರೀಕರಣ ಸದ್ಯದಲ್ಲೇ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಈ ನಡುವೆ ಕಂಗನಾ ಅಭಿನಯದ ಭಾರತ್ ಭಾಗ್ಯ ವಿಧಾತ ಚಿತ್ರವು ಮುಂಬೈನಲ್ಲಿ ನಡೆದ ೨೬/೧೧ ರ ಭಯೋತ್ಪಾದಕ ದಾಳಿಯ ಸಮಯದಲ್ಲಿ ತೆರೆಮರೆಯಲ್ಲಿ ಶ್ರಮಿಸಿದ ನರ್ಸ್ ಗಳ ಜೀವನದ ಕಥೆಯನ್ನು ಆಧರಿಸಿದೆ. ಈ ದೇಶಭಕ್ತಿ ಮತ್ತು ಭಾವನಾತ್ಮಕ ಕಥೆಯುಳ್ಳ ಸಿನಿಮಾ ಜೂನ್ ೧೨ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಹಾಗಾಗಿ ವೈರಲ್ ವಿಡಿಯೋ ಕೇವಲ ಸಿನಿಮಾದ ಪಾತ್ರದ ನೋಟವಾಗಿದ್ದು, ಮದುವೆಯ ವದಂತಿಗಳಿಗೆ ತೆರೆ ಬಿದ್ದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular