HomeLatest NewsBIG NEWS: ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿ: AAP ನಾಲ್ವರು ಶಾಸಕರು ಅಮಾನತು

BIG NEWS: ಲೆಫ್ಟಿನೆಂಟ್ ಗವರ್ನರ್ ಭಾಷಣಕ್ಕೆ ಅಡ್ಡಿ: AAP ನಾಲ್ವರು ಶಾಸಕರು ಅಮಾನತು

ನವದೆಹಲಿ: ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರ ಭಾಷಣಕ್ಕೆ ಅಡ್ಡಿಯುಂಟು ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃವದ ಬಿಜೆಪಿ ಸರ್ಕಾರ ಎಎಪಿಯ ನಾಲ್ವರು ಶಾಸಕರನ್ನು ಅಮಾನತುಗೊಳಿಸಿದೆ.

ದೆಹಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದ ಉಳಿದ ಮೂರು ದಿನಗಳವರೆಗೆ ಎಎಪಿ ಶಾಸಕರಾದ ಸಂಜೀವ್ ಝಾ, ಸೋಮ್ ದತ್, ಕುಲದೀಪ್ ಕುಮಾರ್ ಹಾಗೂ ಜರ್ನೈಲ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ.

ಅಧಿವೇಶನದಲ್ಲಿ ಲೆಫ್ಟಿನೆಂಟ್ ಗವರ್ನರ್ ಮಾತನಾಡುತ್ತಿದ್ದ ವೇಳೆ ಎಎಪಿ ಶಾಸಕರು ದೆಹಲಿ ವಾಯುಮಾಲಿನ್ಯದ ಬಗ್ಗೆ ಪ್ರಸ್ತಾಪಿಸಿ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಭಾಧ್ಯಕ್ಷ ವಿಜೇಂದರ್ ಗುಪ್ತಾ ವಿಪಕ್ಷ ನಾಯಕರನ್ನು ಸದನದಿಂದ ಹೊರಗೆ ಕರೆದೊಯ್ಯುವಂತೆ ಮಾರ್ಷಲ್ ಗಳಿಗೆ ಆದೇಶಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular