HomeLatest NewsGood News: ಎಲ್ಲಾ ‘ಬಿ’ ಖಾತಾಗಳಿಗೆ ‘ಎ’ ಖಾತಾ ಮಾನ್ಯತೆ ನೀಡಲು ಒಪ್ಪಿಗೆ

Good News: ಎಲ್ಲಾ ‘ಬಿ’ ಖಾತಾಗಳಿಗೆ ‘ಎ’ ಖಾತಾ ಮಾನ್ಯತೆ ನೀಡಲು ಒಪ್ಪಿಗೆ

ಕರ್ನಾಟಕ ಸರ್ಕಾರ ಆಸ್ತಿ ಮಾಲೀಕರಿಗೆ ಗುಡ್ ನ್ಯುಸ್ ನೀಡಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಮಾದರಿಯಲ್ಲಿ ರಾಜ್ಯದ ಎಲ್ಲಾ ಆಸ್ತಿಗಳಿಗೆ ‘ಎ’ ಖಾತಾ ಮಾನ್ಯತೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ‘ಬಿ’ ಖಾತಾ ಆಸ್ತಿಗಳಿಗೆ ಜಿಬಿಎ ಮಾದರಿಯಲ್ಲಿ ‘ಎ’ ಖಾತಾ ಮಾನ್ಯತೆ ನೀಡಲು ಅನುಮೋದನೆ ಕೊಡಲಾಗಿದೆ.

ಸರ್ಕಾರದ ಈ ತೀರ್ಮಾನದಿಂದ ರಾಜ್ಯದ ಸುಮಾರು 10 ಲಕ್ಷ ‘ಬಿ’ ಖಾತಾ ಆಸ್ತಿಗಳಿಗೆ ‘ಎ’ ಖಾತಾ ಮಾನ್ಯತೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ರಾಜ್ಯದ ಮಹಾನಗರ ಪಾಲಿಕೆಗಳು, ನಗರಸಭೆ ವ್ಯಾಪ್ತಿಗಳಲ್ಲಿ ‘ಎ’ ಖಾತಾ ಮಾನ್ಯತೆ ನೀಡಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ‘ಬಿ’ ಖಾತಾ ನಿವೇಶನ, ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳಿಗೆ ‘ಎ’ ಖಾತಾ ಮಾನ್ಯತೆ ಸಿಗಲಿದೆ. ‘ಬಿ’ ಖಾತೆಯಿಂದ ‘ಎ’ ಖಾತೆಗೆ ಮಾನ್ಯತೆ ಪಡೆಯಲು ಆಸ್ತಿ ಮಾಲೀಕರು ದಂಡವನ್ನು ಪಾವತಿ ಮಾಡಬೇಕಿದೆ. ಎಷ್ಟು ದಂಡ? ಎನ್ನುವುದು ಇನ್ನೂ ಅಂತಿಮವಾಗಿಲ್ಲ.

‘ಎ’ ಖಾತಾ ಮಾನ್ಯತೆ ನೀಡುವ ಕಾರಣ ಆಸ್ತಿ ಮಾಲೀಕರು ಪಾವತಿ ಮಾಡುವ ದಂಡದಿಂದ ಸರ್ಕಾರದ ಬೊಕ್ಕಸ ತುಂಬುತ್ತದೆ. ಈಗಾಗಲೇ ಜಿಬಿಎ ವ್ಯಾಪ್ತಿಯಲ್ಲಿ ಆಸ್ತಿಯ ಮಾರ್ಗಸೂಚಿ ದರದ ಶೇ 5ರಷ್ಟು ದಂಡ ಕಟ್ಟಿ ‘ಎ’ ಖಾತಾ ಮಾನ್ಯತೆ ಪಡೆಯಲು ಅವಕಾಶ ಕೊಡಲಾಗಿತ್ತು.

‌ಆದರೆ ಶೇ 5ರಷ್ಟು ದಂಡಕ್ಕೆ ಆಕ್ಷೇಪವೂ ವ್ಯಕ್ತವಾಗಿತ್ತು.‌ ಸರ್ಕಾರ ನಿರೀಕ್ಷೆ ಮಾಡಿದಷ್ಟು ಅರ್ಜಿಯೂ ಸಲ್ಲಿಕೆ ಆಗಿರಲಿಲ್ಲ. ಆದ್ದರಿಂದ ಹಾಗಾಗಿ ಶೇ 5ರ ದಂಡದ ಪ್ರಮಾಣ ಇಳಿಕೆ ಬಗ್ಗೆ ಸರ್ಕಾರ ಮಟ್ಟದಲ್ಲಿ ಇನ್ನೂ ತೀರ್ಮಾನವಾಗಬೇಕಿದೆ.

ಸರ್ಕಾರ ಈ ಕುರಿತು ಚರ್ಚಿಸಿ ‘ಎ’ ಖಾತಾ ಮಾನ್ಯತೆ ನೀಡಲು ಆಸ್ತಿ ಮಾಲೀಕರು ಎಷ್ಟು ದಂಡ ಪಾವತಿ ಮಾಡಬೇಕು ಎಂದು ಅಧಿಕೃತ ಆದೇಶವನ್ನು ಹೊರಡಿಸಲಿದೆ.

ಎ ಮತ್ತು ಬಿ ಖಾತಾ ವಿವರಣೆ: ಆಸ್ತಿಗಳನ್ನು ಎ-ಖಾತಾ (A Khata) ಮತ್ತು ಬಿ-ಖಾತಾ (B Khata) ಎಂದು ನೋಂದಣಿ ಮತ್ತು ತೆರಿಗೆಗೆ ಸಂಬಂಧಿಸಿದ ದಾಖಲೆಗಳ ವರ್ಗೀಕರಣಕ್ಕೆ ಅನುಕೂಲವಾಗುವಂತೆ ವಿಭಾಗ ಮಾಡಲಾಗುತ್ತದೆ. ಎ-ಖಾತಾ ಸಂಪೂರ್ಣ ಕಾನೂನು ಮಾನ್ಯತೆ ಮತ್ತು ಬ್ಯಾಂಕ್ ಸಾಲ, ಕಟ್ಟಡ ಅನುಮತಿಗಳಂತಹ ಸೌಲಭ್ಯಗಳನ್ನು ನೀಡುತ್ತದೆ.

ಆದರೆ ಬಿ-ಖಾತಾ ಅನಧಿಕೃತ ನಿರ್ಮಾಣ ಅಥವಾ ನಿಯಮಗಳ ಉಲ್ಲಂಘನೆ ವ್ಯಾಪ್ತಿಗೆ ಸೇರುತ್ತದೆ. ಇದರಿಂದಾಗಿ ಸಾಲ ಸಿಗುವುದು ಕಷ್ಟವಾಗುತ್ತದೆ. ಇತ್ತೀಚೆಗೆ ಕರ್ನಾಟಕ ಸರ್ಕಾರ ಅನೇಕ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸಲು ಅನುಮೋದನೆ ನೀಡಿದೆ. ಜಿಬಿಎ ವ್ಯಾಪ್ತಿಯಲ್ಲಿ ಇದನ್ನು ಮಾಡಲಾಗುತ್ತಿದೆ. 

ಈಗ ಕರ್ನಾಟಕ ಸರ್ಕಾರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ರಮ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸಿರುವ ಬಡಾವಣೆಗಳಲ್ಲಿನ ಬಿ-ಖಾತಾದ ನಿವೇಶನ/ ಕಟ್ಟಡ/ ಅಪಾರ್ಟ್‌ಮೆಂಟ್/ ಫ್ಲಾಟ್‌ಗಳಿಗೆ ಎ-ಖಾತಾ ಮಾನ್ಯತೆ ನೀಡಲು ಅನುಮೋದನೆ ಕೊಟ್ಟಿದೆ.

ಸಿಎಂ ಪೋಸ್ಟ್: ಮುಖ್ಯಮಂತ್ರಿಗಳ ಕಚೇರಿ ಈ ಕುರಿತು ಪೋಸ್ಟ್ ಹಾಕಿದ್ದು, ‘ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿರುವ ಅಥವಾ ಮಾರಾಟ ಮಾಡುವ ಪ್ರಕ್ರಿಯೆಯನ್ನು ತಡೆಯುವ ಉದ್ದೇಶದಿಂದ ಇಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದೆ.

‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳ ಬಿ – ಖಾತಾ ನಿವೇಶನ / ಕಟ್ಟಡ / ಅಪಾರ್ಟ್‌ಮೆಂಟ್‌ಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ಎ – ಖಾತಾ ನೀಡಲು ತೀರ್ಮಾನಿಸಲಾಗಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular