HomeRecipiesಇಲ್ಲಿದೆ ಟೋಮೆಟೊ ಸೂಪ್ ಮಾಡುವ ವಿಧಾನ

ಇಲ್ಲಿದೆ ಟೋಮೆಟೊ ಸೂಪ್ ಮಾಡುವ ವಿಧಾನ

ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು.

ಟೋಮೋಟೋ ಸೂಪ್ ಗೆ ಬೇಕಾಗುವ ಪದಾರ್ಥ :

ಟೋಮೋಟೋ : 4

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಂಪು ಮೆಣಸಿನ ಪುಡಿ : ½ ಚಮಚ

ಸಕ್ಕರೆ :1/2 ಚಮಚ

ಬ್ರೆಡ್ ತುಂಡು : 4-5

ಕಾಳು ಮೆಣಸು :1/2 ಚಮಚ

ಉಪ್ಪು : ರುಚಿಗೆ ತಕ್ಕಷ್ಟು

ಕೊತ್ತಂಬರಿ ಸೊಪ್ಪು : ಸ್ವಲ್ಪ

ತಾಜಾ ಕ್ರೀಂ : 1 ಚಮಚ

ಟೋಮೋಟೋ ಸೂಪ್ ಮಾಡುವ ವಿಧಾನ :

ಟೋಮೋಟೋವನ್ನು ಚೆನ್ನಾಗಿ ತೊಳೆದು ಎರಡು ಕಪ್ ನೀರಿನಲ್ಲಿ ಟೋಮೋಟೋ ಹಾಕಿ ಕುದಿಸಲು ಇಡಿ. ಸಣ್ಣ ಉರಿಯಲ್ಲಿ ಟೋಮೋಟೋ ಚೆನ್ನಾಗಿ ಬೇಯಲಿ. ನಂತ್ರ ತಣ್ಣನೆ ನೀರಿಗೆ ಬೆಂದ ಟೋಮೋಟೋ ಹಾಕಿ ಅದ್ರ ಸಿಪ್ಪೆ ತೆಗೆಯಿರಿ. ನಂತ್ರ ಟೋಮೋಟೋವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

ಇನ್ನೊಂದು ಪಾತ್ರೆಗೆ ರುಬ್ಬಿದ ಟೋಮೋಟೋ ಹಾಕಿ ಬೇಯಿಸಲು ಇಡಿ. ಅದಕ್ಕೆ ಸಕ್ಕರೆ,ಮೆಣಸಿನ ಪುಡಿ ಸೇರಿಸಿದ ಮೇಲಿನ ಎಲ್ಲ ಪದಾರ್ಥವನ್ನು ಹಾಕಿ 8 ನಿಮಿಷ ಕುದಿಸಿ. ಮೇಲೆ ಹಸಿ ಕೊತ್ತಂಬರಿ ಸೊಪ್ಪು,ಕ್ರೀಂ ಹಾಕಿ ಸರ್ವ್ ಮಾಡಿ.

For Latest News Updates, Join Our Whatsapp Community🚩
RELATED ARTICLES

Most Popular