ಬೆಂಗಳೂರು : ನಾಳೆಯಿಂದ 10 ದಿನ ಸುಮನಹಳ್ಳಿ ಚಿತಾಗಾರ ಬಂದ್ ಆಗಲಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ತುರ್ತು ನಿರ್ವಹಣೆ ಹಿನ್ನೆಲೆ ಫೆ.20 ರಿಂದ 10 ದಿನ ಸುಮನಹಳ್ಳಿ ಚಿತಾಗಾರ ಬಂದ್ ಮಾಡಲಾಗುತ್ತಿದೆ ಎಂದು ಪ್ರಕಟಣೆ ಹೊರಡಿಸಿದೆ. ತುರ್ತು ನಿರ್ವಹಣಾ ಕೆಲಸ ಹಿನ್ನೆಲೆ 10 ದಿನಗಳ ಕಾಲ ಅಂತ್ಯಕ್ರಿಯೆ ನಡೆಯುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ. ತುರ್ತು ನಿರ್ವಹಣೆ ಹಿನ್ನೆಲೆ ಫೆ.20 ರಿಂದ ಫೆ.29 ರವರೆಗೆ ಅಂತ್ಯಕ್ರಿಯೆ ತಾತ್ಕಾಲಿಕ ಸ್ಥಗಿತಗೊಳ್ಳಲಿದೆ. ಸುಮನಹಳ್ಳಿ ಬದಲು ಬೇರೆ ಚಿತಾಗಾರ ಬಳಸಿಕೊಳ್ಳುವಂತೆ ಬಿಬಿಎಂಪಿ ಮನವಿ ಮಾಡಿದೆ.