ಬೆಂಗಳೂರು : ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಶಿಕ್ಷಕಿಯೊಬ್ಬರು ರಕ್ತ ಬರುವಂತೆ ವಿದ್ಯಾರ್ಥಿಗೆ ರಾಡ್ ನಿಂದ ಹೊಡೆದಿದ್ದಾರೆ.
7 ನೇ ತರಗತಿ ವಿದ್ಯಾರ್ಥಿ ಕೈಗೆ ರಾಡ್ ನಿಂದ ಹೊಡೆದು ಶಿಕ್ಷಕಿ ಮೃಗೀಯ ವರ್ತನೆ ತೋರಿದ್ದಾರೆ. ಪರಿಣಾಮ ವಿದ್ಯಾರ್ಥಿ ಫರ್ದಿನ್ ಕೈಗೆ ಗಂಭೀರ ಗಾಯಗಳಾಗಿದ್ದು, ಆರು ಹೊಲಿಗೆ ಹಾಕಲಾಗಿದೆ. ಹುಳಿಮಾವು ಸಾಯಿರಾಮ್ ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸಲಾಗಿದೆ.
ಘಟನೆ ನಡೆದು 3 ದಿನಗಳಾದರೂ ಶಿಕ್ಷಕಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಬಿಇಒ ಶಾಲೆಗೆ ನೋಟಿಸ್ ನೀಡಿದ್ದಾರೆ.