alex Certify ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ 70 ರ ದಶಕದ ಈ ಪ್ರೇಮ ಕಥೆ; ಪ್ರೇಯಸಿ ಭೇಟಿಗಾಗಿ ಭಾರತದಿಂದ ಸ್ವೀಡನ್‌ ಗೆ ಸೈಕಲ್‌ ತುಳಿದಿದ್ದರು ಈ ಕಲಾವಿದ…!

ಪ್ರೇಮಕ್ಕೆ ಯಾವುದೇ ಗಡಿ, ಭಾಷೆ, ಧರ್ಮದ ಹಂಗಿಲ್ಲ ಅನ್ನೋದು ಆಗಾಗ ಸಾಬೀತಾಗುತ್ತದೆ. ಇಂಥದ್ದೇ ವಿಚಾರದಲ್ಲಿ ಕಲಾವಿದನೊಬ್ಬ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಸ್ವೀಡನ್ ಗೆ ನಾಲ್ಕು ತಿಂಗಳು ಸೈಕಲ್ ಸವಾರಿ ಮಾಡಿರುವ ಕಥೆ ಇದೀಗ ಅನಾವರಣವಾಗಿದೆ.

ಹೌದು, ಡಾ ಪ್ರದ್ಯುಮ್ನ ಕುಮಾರ್ ಮಹಾನಂದಿಯಾ ಎಂಬ ಕಲಾವಿದ, ಭಾರತಕ್ಕೆ ಭೇಟಿ ನೀಡಿದ್ದ ಚಾರ್ಲೊಟ್ ವಾನ್ ಶೆಡ್ವಿನ್ ಅವರನ್ನು ಪ್ರೀತಿಸಲು ಶುರು ಮಾಡಿದ್ದಾರೆ. ಅವರ ಕಥೆ ಕೇಳಿದ್ರೆ ಖಂಡಿತವಾಗಿಯೂ ನಿಮ್ಮನ್ನು ಪ್ರೀತಿಯಲ್ಲಿ ಮುಳುಗಿಸುವುದರಲ್ಲಿ ಸಂಶಯವಿಲ್ಲ. ಈ ಪ್ರೇಮಕಥೆಯು 70ರ ದಶಕದ್ದು.

1975 ರಲ್ಲಿ ಮಹಾನಂದಿಯಾ ಅವರು ಪ್ರಸಿದ್ಧ ಕಲಾವಿದರಾಗಿದ್ದು ಹಾಗೂ ಕಲಾ ಕಾಲೇಜಿನ ವಿದ್ಯಾರ್ಥಿಯಾಗಿದ್ದರು. ಈ ವೇಳೆ ಚಾರ್ಲೊಟ್ ದೆಹಲಿಗೆ ಬಂದಿದ್ದಾರೆ. ಈ ವೇಳೆ ಚಾರ್ಲೋಟ್ ರ ಭಾವಚಿತ್ರ ಬಿಡಿಸುವಾಗ ಆಕೆಯ ಸೌಂದರ್ಯ ಮತ್ತು ಸರಳತೆಗೆ ಮನಸೋತಿದ್ದಾರೆ. ಆಕೆಯನ್ನು ಪ್ರೇಮಿಸಲು ಶುರು ಮಾಡಿದ್ದಾರೆ. ನಮ್ಮ ಮೊದಲ ಭೇಟಿಯ ಸಮಯದಲ್ಲಿ ನಾವು ಆಯಸ್ಕಾಂತಗಳಂತೆ ಪರಸ್ಪರ ಸೆಳೆಯಲ್ಪಟ್ಟಿದ್ದೇವೆ. ಇದು ಮೊದಲ ನೋಟದಲ್ಲೇ ಪ್ರೀತಿ ಎಂದು ಮಹಾನಂದಿಯಾ ಹೇಳಿದ್ದಾರೆ.

ಚಾರ್ಲೊಟ್ ಸ್ವೀಡನ್ ಗೆ ಹೊರಡುವ ವೇಳೆಗೆ, ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ, ಮಹಾನಂದಿಯಾ ತನ್ನ ಅಧ್ಯಯನವನ್ನು ಪೂರ್ಣಗೊಳಿಸಬೇಕಾಗಿತ್ತು. ಚಾರ್ಲೊಟ್ ಸ್ವೀಡನ್‌ಗೆ ಹೋಗಲೇಬೇಕಾಯಿತು. ಆದರೂ, ನಿರಂತರವಾಗಿ ಪತ್ರಗಳನ್ನು ಬರೆಯುವ ಮೂಲಕ ಪ್ರೇಮಿಗಳು ಸಂಪರ್ಕದಲ್ಲಿದ್ದರು. ಅಂತಿಮವಾಗಿ, ಒಂದು ವರ್ಷದ ನಂತರ, ಮಹಾನಂದಿಯಾ ತನ್ನ ಹೆಂಡತಿಯನ್ನು ಭೇಟಿ ಮಾಡಲು ನಿರ್ಧರಿಸಿದ್ರು. ಆದರೆ, ವಿಮಾನ ಟಿಕೆಟ್ ಖರೀದಿಸಲು ತನ್ನ ಬಳಿ ಹಣವಿಲ್ಲದಿದ್ದರಿಂದ ಸೈಕಲ್ ಖರೀದಿಸಲು ತಮ್ಮಲ್ಲಿದ್ದ ಎಲ್ಲವನ್ನೂ ಮಾರಾಟ ಮಾಡಿದರು.

ಸ್ವೀಡನ್ ನ ಬೋರಾಸ್ ಪಟ್ಟಣವನ್ನು ತಲುಪಲು ಅವರು ನಾಲ್ಕು ತಿಂಗಳ ಕಾಲ ಸೈಕಲ್ ತುಳಿದಿದ್ದರು. ಪ್ರಯಾಣದ ಸಮಯದಲ್ಲಿ, ಅವರು ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮತ್ತು ಟರ್ಕಿಯನ್ನು ದಾಟಿದರು. ದಾರಿಮಧ್ಯೆ ಅವರ ಸೈಕಲ್ ಹಲವಾರು ಬಾರಿ ಕೆಟ್ಟುಹೋಗಿತ್ತು. ಅಲ್ಲದೆ ಹಲವಾರು ಸಲ ಆಹಾರವೂ ಸಿಗುತ್ತಿರಲಿಲ್ಲ. ಆದರೂ ಕೂಡ ತಮ್ಮ ಪ್ರಯತ್ನವನ್ನು ಅವರು ಬಿಡಲಿಲ್ಲ. ಮಹಾನಂದಿಯಾ ಅವರು ಜನವರಿ 22, 1977 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿ, ಮೇ 28 ರಂದು ಯುರೋಪ್ ತಲುಪಿದರು. ಅವರು ಪ್ರತಿದಿನ ಸುಮಾರು 70 ಕಿ.ಮೀ ಸೈಕಲ್‌ ತುಳಿಯುತ್ತಿದ್ದರು.

ಕೊನೆಗೂ ಈ ಪ್ರೇಮಪಕ್ಷಿಗಳು ಅಧಿಕೃತವಾಗಿ ಸ್ವೀಡನ್‌ನಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪಿ.ಕೆ. ಮಹಾನಂದಿಯವರು ಈಗಲೂ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ಚಾರ್ಲೊಟ್ ತನ್ನ ತಂದೆಯನ್ನು ಮೊದಲ ಬಾರಿಗೆ ಭೇಟಿಯಾದಾಗ ಸೀರೆ ಧರಿಸಿದ್ದಳು. ಅವಳು ಹೇಗೆ ನಿರ್ವಹಿಸುತ್ತಿದ್ದಳು ಎಂದು ನನಗೆ ಇನ್ನೂ ತಿಳಿದಿಲ್ಲ. ನನ್ನ ತಂದೆ ಮತ್ತು ಕುಟುಂಬದವರ ಆಶೀರ್ವಾದದೊಂದಿಗೆ ನಾವು ಬುಡಕಟ್ಟು ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದೇವೆ ಎಂದು ಮಹಾನಂದಿಯಾ ನೆನಪಿಸಿಕೊಳ್ಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...