HomeLatest NewsBREAKING: ಮಾಂಗಲ್ಯ ಧಾರಣೆಗೂ ಮುನ್ನ ಹೃದಯಾಘಾತದಿಂದ ವರನ ತಂದೆ ಸಾವು: ಮುರಿದು ಬಿದ್ದ ಮದುವೆ

BREAKING: ಮಾಂಗಲ್ಯ ಧಾರಣೆಗೂ ಮುನ್ನ ಹೃದಯಾಘಾತದಿಂದ ವರನ ತಂದೆ ಸಾವು: ಮುರಿದು ಬಿದ್ದ ಮದುವೆ

ರಾಯಚೂರು: ಮಾಂಗಲ್ಯ ಧಾರಣೆಗೂ ಮುನ್ನ ವರನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಮದುವೆಯೇ ಮುರಿದು ಬಿದ್ದ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರಿನ ಜೈನ್ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಸಿಂಧನೂರಿನ ಗಂಗಾನಗರದ ಶರಣಯ್ಯಸ್ವಾಮಿ (55) ಮೃತ ದುರ್ದೈವಿ. ಇಂದು ಶರಣಯ್ಯಸ್ವಾಮಿ ಮಗನ ಮದುವೆ ಸಮಾರಂಭವಿತ್ತು. ಮುಂಜಾನೆ 5 ಗಂಟೆಗೆ ವರ, ವಧುವಿನ ಕೊರಳಿಗೆ ತಾಳಿ ಕಟ್ಟಬೇಕಾಗಿತ್ತು. ಇನ್ನೇನು ಮುಹೂರ್ತ ಸಮೀಪಿಸುತ್ತಿದೆ ಎನ್ನುವಾಗಲೇ ವರನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮದುವೆ ಸಮಾರಂಭದ ಸಂಭ್ರಮದಲ್ಲಿದ್ದ ಎರಡೂ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಎರಡು ಮೂರು ದಿನಗಳಿಂದ ಲವಲವಿಕೆಯಿಂದ ಓಡಾಡಿಕೊಂಡಿದ್ದ ಶರಣಯ್ಯಸ್ವಾಮಿ ಮಗನ ಮದುವೆಗೆ ಕೆಲ ಸಮಯದ ಮುಂಚೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮದುವೆ ಸಮಾರಂಭವೇ ಮುರಿದು ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular