HomeLatest Newsಹೊಸ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್: ಭಾರೀ ದರ ಇಳಿಕೆ ಮಾಡಿದ ಹುಂಡೈ, ಟಾಟಾ

ಹೊಸ ಕಾರ್ ಖರೀದಿಸುವವರಿಗೆ ಗುಡ್ ನ್ಯೂಸ್: ಭಾರೀ ದರ ಇಳಿಕೆ ಮಾಡಿದ ಹುಂಡೈ, ಟಾಟಾ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ದರ ಪರಿಷ್ಕರಣೆ ಮಾಡಲಾಗಿದ್ದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ.

ಜಿಎಸ್‌ಟಿ ಪರಿಷ್ಕರಣೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ವಾಹನ ತಯಾರಿಕಾ ಕಂಪನಿಗಳು ಮುಂದಾಗಿದ್ದು, ಸೆಪ್ಟೆಂಬರ್ 22 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ವಾಹನ ತಯಾರಿಕಾ ಕಂಪನಿ ಹುಂಡೈ ಮೋಟಾರ್ ಇಂಡಿಯಾ ಮತ್ತು ಟಾಟಾ ಮೋಟರ್ಸ್ ಕಂಪನಿ ಜಿಎಸ್‌ಟಿ ದರ ಕಡಿತದ ಪರಿಣಾಮವಾಗಿ ತಮ್ಮ ವಾಹನಗಳ ಬೆಲೆ ಇಳಿಕೆಯಾಗುವುದನ್ನು ಪ್ರಕಟಿಸಿವೆ.

ಹುಂಡೈ ವೆರ್ನಾ ಮಾದರಿಯ ವಾಹನದ ಬೆಲೆ 60,640ರೂ., ಪ್ರೀಮಿಯಂ ಎಸ್.ಯು.ವಿ. ಟಕ್ಸನ್ ದರ 2.4 ಲಕ್ಷ ರೂ.ನಷ್ಟು ಕಡಿಮೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಟಾ ಮೋಟಾರ್ಸ್ ಕಂಪನಿ ವಾಣಿಜ್ಯ ವಾಹನಗಳ ದರ 30 ಸಾವಿರ ರೂ.ನಿಂದ 4.65 ಲಕ್ಷ ರೂಪಾಯಿವರೆಗೆ ಕಡಿಮೆಯಾಗಲಿದೆ. ವಾಹನದ ಮಾದರಿಯನ್ನು ಆಧರಿಸಿ ದರ ಇಳಿಕೆ ಆಗಿರುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular