ಹೊಟ್ಟೆ ಉರಿ, ಗ್ಯಾಸ್, ಹೊಟ್ಟೆ ತೊಳಸುವುದು ಅಥವಾ ಎಸಿಡಿಟಿ ಸಮಸ್ಯೆ ಸರ್ವೇಸಾಮಾನ್ಯ. ಈ ಸಮಸ್ಯೆಯಿಂದ ನೀವು ಸುಲಭವಾಗಿ ಮುಕ್ತಿ ಪಡೆಯಬಹುದು. ಎಸಿಡಿಟಿಗೆ ಮದ್ದು ನಿಮ್ಮ ಅಂಗೈಯಲ್ಲೇ ಇದೆ.
ಬಾಳೆಹಣ್ಣು ಎಸಿಡಿಟಿಯಿಂದ ಪಾರಾಗಲು ಸಹಾಯ ಮಾಡುತ್ತದೆ. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿರುವುದರಿಂದ ದೇಹದ ಪಿಎಚ್ ಲೆವಲ್ ಅನ್ನು ಕಡಿಮೆ ಮಾಡುತ್ತದೆ. ಫೈಬರ್ ಅಂಶ ಜಾಸ್ತಿಯಾಗಿರೋದ್ರಿಂದ ಬಾಳೆಹಣ್ಣು ಸೇವನೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.
ಕಲ್ಲಂಗಡಿ ಹಣ್ಣಿನಲ್ಲಿ ಆ್ಯಂಟಿ ಒಕ್ಸಿಡೆಂಟ್ ಗಳಿವೆ. ಇವು ಎಸಿಡಿಟಿಯನ್ನು ಕಡಿಮೆ ಮಾಡುತ್ತವೆ. ಬಾಡಿಯನ್ನು ಹೈಡ್ರೇಟ್ ಆಗಿಟ್ಟುಕೊಳ್ಳಲು ಕಲ್ಲಂಗಡಿ ಅಥವಾ ಖರಬೂಜ ಹಣ್ಣು ನೆರವಾಗುತ್ತದೆ. ಹೇರಳವಾದ ಫೈಬರ್ ಅಂಶವನ್ನು ಹೊಂದಿರುವ ಸೇಬು ಮತ್ತು ಪಪ್ಪಾಯ ಹಣ್ಣನ್ನು ತಿಂದ್ರೆ ನೀವು ಎಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಎಸಿಡಿಟಿ ತೊಂದರೆ ಇರುವವರು ಎಳನೀರು ಸೇವಿಸುವುದು ಉತ್ತಮ. ಎಳನೀರು ನೈಸರ್ಗಿಕ ಪಾನೀಯವಾಗಿರೋದ್ರಿಂದ ಆರೋಗ್ಯಕ್ಕೂ ಒಳ್ಳೆಯದು. ತಣ್ಣಗಿನ ಹಾಲು ಕುಡಿದರೂ ಎಸಿಡಿಟಿ ಕಡಿಮೆಯಾಗುತ್ತದೆ. ದೇಹದಲ್ಲಿರುವ ಎಸಿಡ್ ಅಂಶಗಳನ್ನೆಲ್ಲ ಹಾಲು ಹೀರಿಕೊಳ್ಳುತ್ತದೆ. ಗ್ಯಾಸ್ಟ್ರಿಕ್ ಸಿಸ್ಟಮ್ ನಲ್ಲಾಗುವ ಉರಿಯನ್ನೂ ಶಮನಗೊಳಿಸುತ್ತದೆ.
ಎದೆ ಅಥವಾ ಹೊಟ್ಟೆಯಲ್ಲಿ ಉರಿ ಕಾಣಿಸಿಕೊಂಡ್ರೆ ಸಕ್ಕರೆ ಬೆರೆಸದೇ ತಣ್ಣಗಿನ ಹಾಲು ಕುಡಿಯಿರಿ. ತಣ್ಣಗಿನ ಮೊಸರು ಅಥವಾ ಮಜ್ಜಿಗೆ ಕೂಡ ಎಸಿಡಿಟಿಗೆ ರಾಮಬಾಣ. ಎಸಿಡಿಟಿಯನ್ನು ಕಡಿಮೆ ಮಾಡುವುದರ ಜೊತೆಗೆ ಜೀರ್ಣವ್ಯವಸ್ಥೆಯನ್ನೂ ಮಜ್ಜಿಗೆ ಸರಿಪಡಿಸುತ್ತದೆ.