ಐಪಿಎಲ್ ಮಹಾಸಮರ ಏಪ್ರಿಲ್ 5ರಿಂದ ಶುರುವಾಗ್ತಾ ಇದೆ. ಆರಂಭಕ್ಕೂ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ಗೆ ಆಘಾತವುಂಟಾಗಿದೆ. ಆರಂಭಿಕ ಬ್ಯಾಟ್ಸ್ ಮೆನ್ ಶ್ರೇಯಸ್ ಅಯ್ಯರ್ ಮೊದಲ ವಾರದ ಐಪಿಎಲ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಶ್ರೇಯಸ್ ಅಯ್ಯರ್ ಚಿಕನ್ ಗುನ್ಯಾದಿಂದ ಬಳಲುತ್ತಿರುವ ಕಾರಣ ಅವರು ಮೈದಾನಕ್ಕಿಳಿಯುವುದಿಲ್ಲ.
ಶ್ರೇಯಸ್ ಸದ್ಯ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಏಪ್ರಿಲ್ 8ರಂದು ರಾಯಲ್ ಚಾಲೆಂಜರ್ಸ್ ಹಾಗೂ 11ರಂದು ನಡೆಯುವ ಪುಣೆ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಕಾಣಿಸಿಕೊಳ್ಳುವುದಿಲ್ಲ. ಇದಕ್ಕೂ ಮೊದಲೇ ಡೆಲ್ಲಿ ಡೇರ್ ಡೆವಿಲ್ಸ್ ನಲ್ಲಿ ಕೆಲ ಆಟಗಾರರ ಗೈರು ಎದ್ದು ಕಾಣ್ತಾ ಇದೆ.
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಮತ್ತು ಜೆಪಿ ಡ್ಯುಮಿನಿ ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಕೂಡ ಕೆಲ ಪಂದ್ಯಗಳಲ್ಲಿ ಪಾಲ್ಗೊಳ್ತಾ ಇಲ್ಲ. ಇದು ಡೆಲ್ಲಿ ತಂಡಕ್ಕೆ ಬಹಳ ದೊಡ್ಡ ನಷ್ಟವೆಂದ್ರೆ ತಪ್ಪಾಗಲಾರದು.