ತಣ್ಣನೆಯ ಹವಾಮಾನದ ಹೊರಗೆ ಹೋಗುವ ಬದಲು ಕಾರಿನಲ್ಲಿ ಕುಳಿತುಕೊಳ್ಳುವುದೇ ಬೆಸ್ಟ್ ಎಂದು ಹಲವರು ಎಂದುಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು. ಇದಕ್ಕೆ ಕಾರಣ ಅವರ ಕಾರಿನ ಹ್ಯಾಂಡಲ್ ಫ್ರೀಜ್ ಆಗಿತ್ತು.
ತಮ್ಮ ಕಾರನ್ನು ಅನ್‌ಲಾಕ್ ಮಾಡಲು ಸಾಧ್ಯವಾಗದಾಗ ಅವರು ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಕಾರನ್ನು ಅನ್‌ಲಾಕ್ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ, ಶೀತಗಾಳಿಗೆ ನಲುಗಿರುವ ಅಮೆರಿಕದಲ್ಲಿ ನಡೆದಿರುವ ಘಟನೆ ಇದು.
ಈ ಕಾರನ್ನು ಅನ್‌ಲಾಕ್ ಮಾಡಲು ಟ್ವಿಟ್ಟರ್ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಸಲಹೆ ನೀಡಿದ್ದಾರೆ. ಹ್ಯಾಂಡಲ್‌ಗಳನ್ನು ಬಳಸುವ ಅಗತ್ಯವಿಲ್ಲದೇ ಡೋರ್ ಅನ್ನು ಅನ್‌ಲಾಕ್ ಮಾಡುವ ವೈಶಿಷ್ಟ್ಯವನ್ನು ಟೆಸ್ಲಾ ಅಪ್ಲಿಕೇಶನ್ ಹೊಂದಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ.
ಅಂತಹ ಚಳಿಗಾಲದ ತೊಂದರೆಗಳನ್ನು ತಪ್ಪಿಸಲು ಇತರರು ಬೆಚ್ಚಗಿನ ಗ್ಯಾರೇಜ್ನಲ್ಲಿ ಕಾರನ್ನು ನಿಲ್ಲಿಸಲು ಸಲಹೆ ನೀಡಿದ್ದಾರೆ. ಇದು ವಿನ್ಯಾಸ ದೋಷ ಎಂದು ಇನ್ನು ಕೆಲವರು ಹೇಳಿದ್ದಾರೆ. ಕೊನೆಗೂ ಅವರ ಕಾರಿನ ಬಾಗಿಲು ತೆರೆದುಕೊಂಡಿತೆ ಇಲ್ಲವೆ ತಿಳಿದಿಲ್ಲ.