alex Certify ಉಚಿತ ಪಡಿತರ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಚಿತ ಪಡಿತರ ಯೋಜನೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ (ಪಿಎಂಜಿಕೆಎವೈ) ಸಚಿವ ಸಂಪುಟ ಸಭೆಯಲ್ಲಿ ವಿಸ್ತರಣೆಯನ್ನು ನೀಡದ ಕಾರಣ ಸ್ಥಗಿತಗೊಂಡಿದೆ. ಆದರೆ, ಬಡವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಅಗತ್ಯವಿರುವವರಿಗೆ ಉಚಿತವಾಗಿ ಪಡಿತರವನ್ನು ನೀಡುವುದಾಗಿ ಹೇಳಿದೆ. ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಈ ಮಾಹಿತಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರವು ಕೆಜಿಗೆ 3 ರೂ.ಗೆ ಅಕ್ಕಿ ಮತ್ತು 2 ರೂ.ಗೆ ಗೋಧಿಯನ್ನು ನೀಡುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈಗ ಅದನ್ನು ಸ್ಥಗಿತಗೊಳಿಸಲಾಗಿದೆ. NFSA ಅಡಿಯಲ್ಲಿ ಬಡವರಿಗೆ ಅಕ್ಕಿ ಮತ್ತು ಗೋಧಿ ಉಚಿತವಾಗಿ ಸಿಗುತ್ತದೆ. NFSA ವ್ಯಾಪ್ತಿಗೆ ಒಳಪಡುವ ಸುಮಾರು 81.35 ಕೋಟಿ ಜನರು ಉಚಿತವಾಗಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ ಎಂದು ಹೇಳಿದರು.

35 ಕೆಜಿ ಪಡೆಯುತ್ತಿದ್ದವರು ಅನ್ನದಾತ ಯೋಜನೆಯಡಿ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ಉಚಿತವಾಗಿ ಪಡೆಯುವುದು ಮುಂದುವರಿಯುತ್ತದೆ. ಇತರ ಜನರು ತಲಾ 5 ಕೆಜಿಯನ್ನು ಉಚಿತವಾಗಿ ಪಡೆಯುತ್ತಾರೆ. ಆಹಾರ ಭದ್ರತೆಗಾಗಿ ಕೇಂದ್ರವು ಈಗ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಹೊರೆಯನ್ನು ಭರಿಸಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...