
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಫಿಫಾ ವಿಶ್ವಕಪ್ನ ಕೆಲವೊಂದು ರೋಚಕ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಇದೀಗ ವಿಶ್ವಕಪ್ 2022 ವೀಕ್ಷಿಸಲು ಕತಾರ್‌ಗೆ ಕೇರಳದಿಂದ ಒಬ್ಬಂಟಿಯಾಗಿ ಕಾರಿನ ಮೂಲಕ ಸಾಗಿದ ಮಹಿಳೆ ನಾಜಿ ನೌಶಿ ಅವರನ್ನು ಆನಂದ್ ಮಹೀಂದ್ರಾ ಶ್ಲಾಘಿಸಿದ್ದು, ಅದೀಗ ವೈರಲ್ ಆಗಿದೆ.
ಕೈಗಾರಿಕೋದ್ಯಮಿ ತನ್ನ ಟ್ವಿಟ್ಟರ್‌ನಲ್ಲಿ ಮಹಿಳೆಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. “ಈ ವಿಡಿಯೋ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ವಿಜಯದೊಂದಿಗೆ, ಅವರ ಮಹಾಕಾವ್ಯದ ಪ್ರಯಾಣವೂ ವಿಜಯವಾಗಿದೆ ! ನಾನು ನಾಜಿ ನೌಶಿ ಮತ್ತು ಅವರ ಸಾಹಸದ ಧೈರ್ಯಶಾಲಿ ಮನೋಭಾವಕ್ಕೆ ಸೆಲ್ಯೂಟ್ ಮಾಡುತ್ತೇನೆ. ಧನ್ಯವಾದಗಳು” ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಇದಾಗಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ. “ಆನಂದ್ ಭಾಯಿ ನಿಮ್ಮ ಪ್ರತಿಯೊಂದು ಪೋಸ್ಟ್ ಜ್ಞಾನ ಮತ್ತು ಸ್ಫೂರ್ತಿದಾಯಕವಾಗಿದೆ ಎಂದು ಹಲವರು ಕಮೆಂಟ್ ಮೂಲಕ ಹೇಳುತ್ತಿದ್ದರೆ, ಇನ್ನು ಕೆಲವರು ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ.