ಚಳಿಗಾಲ ಎಂದಾಕ್ಷಣ ಎಷ್ಟೋ ಮಂದಿಗೆ ಮೈ ಝುಂ ಎನ್ನುತ್ತದೆ. ಆದರೆ ಮೈನಸ್ ಡಿಗ್ರಿಯಲ್ಲಿ ವಾಸಿಸುವವರ ಕಥೆ ಹೇಗಿರಬೇಡ? ಆದರೆ ಇಲ್ಲೊಬ್ಬ ನೃತ್ಯಗಾರ ಇದೇ ಕೊರೆಯುವ ಚಳಿಯಲ್ಲಿ ನರ್ತಿಸಿ ವೈರಲ್ ಆಗಿದ್ದಾರೆ. ಅದೂ ಎಷ್ಟು ಡಿಗ್ರಿ ಅಂತೀರಾ ಮೈನಸ್ 40 ಡಿಗ್ರಿ!
ಹೌದು. ಕೆನಡಾದ ಪ್ರಭಾವಿ ಗುರುದೀಪ್ ಪಂಧೆರ್ ಅವರು ಭಾಂಗ್ರಾ ನೃತ್ಯವನ್ನು ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಇದನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
“ಇಲ್ಲಿ ಮೈನಸ್ 40 ಡಿಗ್ರಿ ಇದೆ. ಯುಕಾನ್ ಅರಣ್ಯದಲ್ಲಿ ನಾನು ಈ ಕೊರೆಯುವ ಚಳಿಯಲ್ಲಿ ನೃತ್ಯ ಮಾಡುತ್ತಿದ್ದೇನೆ. ಇದರಿಂದ ನನಗೆ ಸಂತೋಷ ಮತ್ತು ಸಕಾರಾತ್ಮಕತೆ ಸಿಗುತ್ತಿದೆ” ಎಂದು ಹೇಳುವ ಮೂಲಕ ಗುರುದೀಪ್ ಭಾಂಗ್ರಾ ನೃತ್ಯ ಮಾಡಿದ್ದಾರೆ. 56 ಸೆಕೆಂಡುಗಳ ಈ ವಿಡಿಯೋಗೆ ಹಲವಾರು ಮೆಚ್ಚುಗೆಗಳು ವ್ಯಕ್ತವಾಗಿವೆ.
ಚಳಿಯನ್ನು ಓಡಿಸಲು ಇದಕ್ಕಿಂತ ಬೇರೆ ಮಾರ್ಗ ಇಲ್ಲ ಎಂದು ಹಲವರು ಕಮೆಂಟಿಗರು ತಿಳಿಸಿದ್ದಾರೆ.