ಯೂಟ್ಯೂಬರ್ಗಳು ತಮ್ಮ ವಿಡಿಯೋಗಳನ್ನು ಹೆಚ್ಚೆಚ್ಚು ಜನ ನೋಡಬೇಕು ಎನ್ನುವ ಉದ್ದೇಶದಿಂದ ಬಹಳ ಸರ್ಕಸ್ ಮಾಡುತ್ತಾರೆ. ಆದರೆ ಕೆಲವೊಮ್ಮೆ ಅದು ಅಪಾಯಕಾರಿಯೂ ಆಗುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತರನ್ನು ಯೂಟ್ಯೂಬರ್ ಚೇಷ್ಟೆ ಮಾಡಿ ಪೇಚಿಗೆ ಸಿಲುಕಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದು. ವಿಡಿಯೋದಲ್ಲಿ ಯೂಟ್ಯೂಬರ್ ಪಾದಚಾರಿಗಳ ಹಿಂದೆ ನಡೆದುಕೊಂಡು ಹೋಗಿ ಹಾರ್ನ್ ಅನ್ನು ಕಿವಿಯಲ್ಲಿ ಊದುತ್ತಾನೆ.
ಆದರೆ ವ್ಯಕ್ತಿಯೊಬ್ಬನಿಗೆ ಹೀಗೆಯೇ ಮಾಡಿದಾಗ ಮಾತ್ರ ಯೂಟ್ಯೂಬರ್ ಗ್ರಹಚಾರ ನೆಟ್ಟಗಿರಲಿಲ್ಲ. ಆ ವ್ಯಕ್ತಿ, ಕೋಪದ ಭರದಲ್ಲಿ, ಯೂಟ್ಯೂಬರ್ಗೆ ಕಪಾಳಮೋಕ್ಷ ಮಾಡಿದ್ದು ಅದೀಗ ವೈರಲ್ ಆಗಿದೆ.
ಆ ವ್ಯಕ್ತಿ ಯೂಟ್ಯೂಬರ್ಗೆ ಕಪಾಳಮೋಕ್ಷ ಮಾಡುವ ಮೊದಲು ಆತನ ಮೇಲೆ ಹಲ್ಲೆ ನಡೆಸುತ್ತಾನೆ. ನಂತರ ಯೂಟ್ಯೂಬರ್ ಸ್ನೇಹಿತ ರಕ್ಷಣೆಗೆ ಬಂದು ಆಗುವ ಅನಾಹುತ ತಪ್ಪಿಸುತ್ತಾನೆ. ಈ ವಿಡಿಯೋ ಹೆಚ್ಚೆಚ್ಚು ಶೇರ್ ಆಗಿದ್ದು, ಯೂಟ್ಯೂಬರ್ ಆಸೆ ಈಡೇರಿದೆ. ಆದರೆ ಕಪಾಳಮೋಕ್ಷ ಮಾಡಿಕೊಂಡ ನೋವು ಮಾತ್ರ ಇನ್ನೂ ಇದ್ದಂತಿದೆ!
https://twitter.com/TheBest_Viral/status/1603872605529858052?ref_src=twsrc%5Etfw%7Ctwcamp%5Etweetembed%7Ctwterm%5E1603872605529858052%7Ctwgr%5Ec0e973aa55cb6a7aa9125302df0708c4153f6a6d%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-pedestrian-slaps-youtuber-for-pulling-bizarre-prank-on-him-6647119.html