ಮನೆಯಲ್ಲಿ ನಿತ್ಯ ಚಹಾ ತಯಾರಿಸುತ್ತೀರಿ ಅಲ್ಲವೇ…? ಹಾಲು ಬೆರೆಸದ ಆ ಚಹಾದ ಪುಡಿಯನ್ನು ಎಸೆಯುವ ಬದಲು ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿಯೋಣ.
ಕೂದಲುಗಳು ಒರಟು ಆಗಿದ್ದರೆ, ಕೂದಲಿನ ಕಪ್ಪು ಬಣ್ಣ ಕಪ್ಪಾಗಿಯೇ ಉಳಿಯಲು ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ.
ಸ್ವಲ್ಪ ನೀರಿಗೆ ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಹಾಕಿ ನೀವು ಮತ್ತೆ ಸೋಸಿ. ತಣ್ಣಗಾದ ನಂತರ ಇದನ್ನು ನಿಮ್ಮ ಕೂದಲುಗಳಿಗೆ ಹಾಗು ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆಯ ನಂತರ ಸ್ನಾನ ಮಾಡಿ. ಇದರಿಂದ ಕೂದಲು ಕಾಂತಿಯುತವಾಗಿ ಮೃದುವಾಗುತ್ತದೆ. ಇದನ್ನು ಕಂಡೀಷನರ್ ಆಗಿಯೂ ಬಳಸಬಹುದು.
ಕಾಲು ನೋವು, ಸುಸ್ತಿನ ಲಕ್ಷಣವಿದ್ದರೆ ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಇದರಲ್ಲಿ ಬಳಸಿರುವ ಚಹಾ ಪುಡಿಯನ್ನು ಹಾಕಿ ಅರ್ಧ ಗಂಟೆ ತನಕ ಕಾಲನ್ನು ಅದ್ದಿಡಿ. ಇದರಿಂದ ಕಾಲಿಗೆ ವಿಶ್ರಾಂತಿ ಸಿಗುತ್ತದೆ.
ಡಸ್ಟ್ ಬಿನ್ ನಿಂದ ಬರುವ ಕೆಟ್ಟ ವಾಸನೆಯನ್ನು ತಡೆಯಲು ಇದನ್ನು ಉಪಯೋಗಿಸಬಹುದು. ಟಾಯ್ಲೆಟ್, ಬಾತ್ ರೂಂ ನಲ್ಲಿ ಫ್ರೆಷನರ್ ಆಗಿ ಕೂಡ ಉಪಯೋಗಿಸಬಹುದು.