
ಲತಾ ಮಂಗೇಶ್ಕರ್ ಅವರು ಹಾಡಿರುವ ಮೇರಾ ದಿಲ್ ಯೇ ಪುಕಾರೆ ಹಾಡು ಸದ್ಯದ ಟ್ರೆಂಡ್. ಎಲ್ಲೆಲ್ಲೂ ಈ ಹಾಡಿನದ್ದೇ ಮಾತು. ಜಾಲತಾಣಗಳಲ್ಲಿ ಇದರದ್ದೇ ಹವಾ. ಇದಕ್ಕೆ ಕಾರಣ, ಪಾಕಿಸ್ತಾನಿ ಹುಡುಗಿ ಆಯೇಷಾ. ಈಕೆ ಈ ಹಾಡಿಗೆ ರೀಮಿಕ್ಸ್ ಮಾಡಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನಂತರ ಪಾಕಿಸ್ತಾನದಲ್ಲಿಯೂ ಈ ಹಾಡಿನ ಹವಾ ಜೋರಾಗಿ ಶುರುವಾಗಿದೆ. ಎಲ್ಲರೂ ಇದೇ ಹಾಡನ್ನು ರೀಮಿಕ್ಸ್ ಮಾಡಿ ಹಾಡುವುದೋ ಇಲ್ಲವೇ ನೃತ್ಯ ಮಾಡಿ ವಿಡಿಯೋ ಮಾಡಲೋ ಶುರುವಿಟ್ಟುಕೊಂಡಿದ್ದಾರೆ.
ಇದರ ಮತ್ತೊಂದು ಭಾಗವಾಗಿ ಇದೀಗ ವಯಸ್ಸಾದ ಮಹಿಳೆಯರ ಗುಂಪು ಮೂಲತಃ ಲತಾ ಮಂಗೇಶ್ಕರ್ ಹಾಡಿರುವ ಹಾಡಿನ ರೀಮಿಕ್ಸ್ ಆವೃತ್ತಿಯನ್ನು ಹಾಡುವುದನ್ನು ಕಾಣಬಹಾಗಿದೆ.
ಮೋರಿಯಾ ಆಕಾಶ್ ಅವರು ಇದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ, ವಯಸ್ಸಾದ ಮಹಿಳೆಯರು ಚಳಿಯ ವಾತಾವರಣಕ್ಕೆ ಶಾಲು, ಉಣ್ಣೆಯ ಬಟ್ಟೆ ಧರಿಸಿ ಈ ಹಾಡನ್ನು ಹಾಡುವುದನ್ನು ನೋಡಬಹುದಾಗಿದೆ.
ಇದನ್ನು ಹರಿಯಾಣದಲ್ಲಿ ಎಲ್ಲೋ ಚಿತ್ರೀಕರಿಸಲಾಗಿದೆ ಎಂದು ಹಲವರು ಗಮನಸೆಳೆದಿದ್ದಾರೆ, ಆದರೆ ರೀಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳವು ಚಾಂದಿನಿ ಚೌಕ್ ಆಗಿದೆ.
ವಿಡಿಯೋ ಇದಾಗಲೇ 1.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಟನ್ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.