ಕ್ರೈಂ ವೆಬ್ಸಿರೀಸ್ನಿಂದ ಪ್ರೇರಣೆ ಪಡೆದ 18 ವರ್ಷದ ಯುವಕನೊಬ್ಬ ಗುರುಗ್ರಾಮ ಮೂಲದ ಕಂಪೆನಿಯೊಂದರ ಮಾನವ ಸಂಪನ್ಮೂಲ ಮುಖ್ಯಸ್ಥರಿಗೆ ಬೆದರಿಕೆ ಹಾಕಿ 12 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನನ್ನು ಬಂಧಿಸಲಾಗಿದೆ.
ಮುಖ್ಯಸ್ಥರನ್ನು ಕೊಲ್ಲಲು ತನಗೆ 26 ಲಕ್ಷ ರೂಪಾಯಿ ಒಪ್ಪಂದ ಬಂದಿದೆ ಎಂದು ಕರೆ ಮಾಡಿ ಯುವಕ ತಿಳಿಸಿದ್ದಾನೆ. 12 ಲಕ್ಷ ರೂಪಾಯಿ ನೀಡದೇ ಹೋದರೆ ಅವರನ್ನು ಮತ್ತು ಅವರ ಕುಟುಂಬವನ್ನು ಅಪಹರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಫೋನ್ ಕರೆ ಆಧರಿಸಿ ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ತನ್ನ ತಾಯಿ ಕ್ಯಾನ್ಸರ್ ರೋಗಿಯಾಗಿದ್ದು, ಕುಟುಂಬ 7 ಲಕ್ಷ ರೂಪಾಯಿ ಸಾಲದಲ್ಲಿದೆ. ಅದ್ದರಿಂದ ವೆಬ್ ಸಿರೀಸ್ ನೋಡಿ ಈ ಐಡಿಯಾ ಮಾಡಿದೆ ಎಂದಿದ್ದಾನೆ.