ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ಮರ್ಸಿಡಿಸ್ ಬೆಂಜ್, ಪೋರ್ಷೆ ಸೇರಿದಂತೆ 5 ಐಷಾರಾಮಿ ಕಾರುಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಈಗ ವೈರಲ್ ಆಗಿದೆ.
ನವೆಂಬರ್ 11ರಂದು 700,000 ಪೌಂಡ್ ಬೆಲೆ ಬಾಳುವ ಈ ಕಾರುಗಳನ್ನು ಎಸೆಕ್ಸ್ ಕೌಂಟಿಯ ಬುಲ್ಫಾನ್ ಗ್ರಾಮದ ಬ್ರೆಡ್ ವುಡ್ ರೋಡ್ ನಲ್ಲಿ ಕಳವು ಮಾಡಲಾಗಿದೆ. 5 ಕಾರುಗಳ ಪೈಕಿ ಕೇವಲ ಒಂದು ಕಾರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಕಳ್ಳನೊಬ್ಬ ಗೇಟ್ ತೆರೆದಿದ್ದು, ಐದು ಕಾರುಗಳಲ್ಲಿ ಮೊದಲೇ ಕುಳಿತಿದ್ದ ಇತರೆ ಕಳ್ಳರು ಅವುಗಳನ್ನು ಚಾಲನೆ ಮಾಡಿಕೊಂಡು ಹೋಗಿದ್ದಾರೆ. ಇದೆಲ್ಲವೂ ಕೇವಲ 60 ಸೆಕೆಂಡುಗಳ ಅವಧಿಯಲ್ಲಿ ನಡೆದಿದೆ.