ಫಿಫಾ ವಿಶ್ವಕಪ್ ಫೀವರ್ ಈಗಾಗಲೇ ಆರಂಭ ಆಗಿದೆ. 32 ತಂಡಗಳು ಸುಮಾರು 64 ಪಂದ್ಯಗಳನ್ನು ಆಡಲಿದ್ದಾರೆ. ಡಿಸೆಂಬರ್ 18ಕ್ಕೆ ಫಿಫಾ ಫೈನಲ್ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ಫೈನಲ್ ಗೂ ಮೊದಲು ಟ್ರೋಫಿ ಅನಾವರಣ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಮೊದಲೇ ಟ್ರೋಫಿ ಅನಾವರಣ ಮಾಡಲಾಗುತ್ತಿದೆ. ಈ ಬಾರಿ ಈ ಟ್ರೋಫಿ ಅನಾವರಣ ಮಾಡ್ತಾ ಇರೋದು ನಟಿ ದೀಪಿಕಾ ಪಡುಕೋಣೆ.
ಹೌದು, ಲೂಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳ್ಳಲಿದೆ. ಭಾರತೀಯ ಚಿತ್ರರಂಗಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಕೊಡುಗೆ ಅಪಾರ, ಜಾಗತಿಕ ಮಟ್ಟದಲ್ಲಿ ದೇಶವನ್ನು ಹಲವು ಬಾರಿ ಪ್ರತಿನಿಧಿಸಿರುವ ಈ ನಟಿ ಇದೀಗ ಮತ್ತೊಮ್ಮೆ ಭಾರತದ ಕೀರ್ತಿ ಹೆಚ್ಚಿಸಲು ಹೊರಟಿದ್ದಾರೆ. ಕನ್ನಡ ಮೂಲದ ಈ ನಟಿ ಮತ್ತಷ್ಟು ಕೀರ್ತಿ ತಂದುಕೊಡಲು ಮುಂದಾಗಿದ್ದಾರೆ.
ಕತಾರ್ ನ ಲೂಸೈಲ್ ನಲ್ಲಿ ಇರುವ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಇನ್ನು 80 ಸಾವಿರ ಆಸನಗಳು ಇಲ್ಲಿ ಇವೆ. ಸದ್ಯ ದೀಪಿಕಾ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಮ್ ಅವರೊಂದಿಗೆ ಪಠಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಜನವರಿ 25 ಕ್ಕೆ ಈ ಚಿತ್ರ ಬಿಡುಗಡೆಯಾಗಲಿದೆ.